Monday, April 27, 2026
ರಾಜಕೀಯಸುದ್ದಿ

ಮತ್ತೆ ಪ್ರಧಾನಿ ಮೋದಿ ಕಾಲೆಳೆದ ರಮ್ಯಾ..! – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸೋ ಕಾಂಗ್ರೆಸ್‍ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ, ನಿನ್ನೆ ವಿಡಿಯೋ ದಾಖಲೆ ಸಮೇತ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಖಾಸಗಿ ಚಾನೆಲ್‍ವೊಂದಕ್ಕೆ ಸಂದರ್ಶನ ನೀಡಿದ್ರು. ಆ ಸಂದರ್ಶನವನ್ನೇ ಆಧಾರವಾಗಿಟ್ಟುಕೊಂಡ ರಮ್ಯಾ, ಇದು ಪಕ್ಕಾ ಸ್ಕ್ರಿಪ್ಟೆಡ್ ಎಂದಿದ್ದಾರೆ. ಈ ವಿಡಿಯೋವನ್ನ ಸರಿಯಾಗಿ ಗಮನಿಸಿ ನೋಡಿ. ಬೇರೆ ಎಲ್ಲಾ ಸಂದರ್ಶನಗಳಂತೆ ಈ ಸಂದರ್ಶನ ಕೂಡ ಸ್ಕ್ರಿಪ್ಟೆಡ್. ವಿಡಿಯೋದ ಮೊದಲ ಮೂರು ಸೆಕೆಂಡ್‍ಗಳಲ್ಲಿ ಸಂದರ್ಶನದ ಪ್ರಶ್ನೆಗಳು ಕಾಣುತ್ತದೆ. ಅಲ್ಲದೆ ಅದರ ಜೊತೆಗೆ ಉತ್ತರಗಳೂ ಇದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಜೊತೆಗೆ ಸುದ್ದಿಗೋಷ್ಠಿ ಅಥವಾ ಡಿಬೇಟ್ ಯಾಕೆ ಮಾಡಲ್ಲ ಎಂಬುದು ಈಗ ತಿಳಿಯಿತಾ ಅಂತಾನೂ ವ್ಯಂಗ್ಯವಾಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು