
ಹಲವು ರಾಷ್ಟ್ರಗಳಲ್ಲಿ ನಡೆಸಿದ ಸರ್ವೆ ಪ್ರಕಾರ, 2010ರಿಂದ 2017ರ ವರೆಗೆ ಆಲ್ಕೊಹಾಲ್ ಬಳಕೆ ಪ್ರಮಾಣ ಭಾರತದಲ್ಲಿ ಶೇಕಡಾ 37.2 ರಷ್ಟು ಹೆಚ್ಚಾಗಿದೆಯಂತೆ. ಈ ಮೊದಲು ಸುಮಾರು 21 ಬಿಲಿಯನ್ ಲೀಟರ್ ನಷ್ಟು ಬಳಕೆಯಾಗ್ತಿದ್ದ ಮದ್ಯದ ಪ್ರಮಾಣ ಈ ಅವಧಿಯಲ್ಲಿ 35.7 ಬಿಲಿಯನ್ ಲೀಟರ್ ನಷ್ಟು ಹೆಚ್ಚಾಗಿದೆಯಂತೆ. 2030 ರೊಳಗೆ ಇನ್ನೂ ಹೆಚ್ಚಾಗಲಿದೆ ಎಂದು ಸಮೀಕ್ಷೆ ಎಚ್ಚರಿಸಿದೆ. ಹೀಗಂತ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಲ್ಯಾನ್‍ಸೆಟ್ ಎನ್ನುವ ಸಂಸ್ಥೆ ವರದಿ ಮಾಡಿದೆ. ಅತೀಹೆಚ್ಚು ಮದ್ಯ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿರವ ದೇಶ ವಿಯೆಟ್ನಾಂ. ಇದನ್ನ ಬಿಟ್ಟರೆ ಭಾರತ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಜಪಾನ್, ಅಮೇರಿಕಾ, ಚೀನಾ, ಫ್ರಾನ್ಸ್ ಮತ್ತು ಜರ್ಮನಿ ಇವೆ.









