
ಮಂಗಳೂರು: ತಣ್ಣೀರುಬಾವಿ ಬ್ರೇಕ್ ವಾಟರ್ ಬಳಿ ನಿಲ್ಲಿಸಿದ ಬೋಟ್‍ನ ಇಂಜಿನ್‍ನನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಬೋಟ್‍ನ ಮಾಲಕರು ತಣ್ಣೀರುಬಾವಿ ಬ್ರೇಕ್ ವಾಟರ್ ಬಳಿ ಸಮುದ್ರಕ್ಕೆ ತೆರಳಿ ಬಲೆಯನ್ನು ಹಾಕಿ ಸಮುದ್ರದ ದಡಕ್ಕೆ ಬಂದು ಟೀ ಕುಡಿಯುವ ಹೋಗಿದ್ದರು. ದೋಣಿ ಮತ್ತು ಅದರಲ್ಲಿದ್ದ ಇಂಜಿನ್‍ನನ್ನು ಸಮುದ್ರದ ದಡದ ಮರಳು ಜಾಗದಲ್ಲಿ ಇಟ್ಟು ಚಹಾ ಕುಡಿಯಲು ಬಂದಿದ್ದರು. ಆದರೆ ಮಧ್ಯಾಹ್ನ ಮರಳಿ ಬರುವಾಗ ದೋಣಿ ಬಳಿಯಿದ್ದ ಯಮಹಾ ಇಂಜಿನ್‍ನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









