
ಕೊಪ್ಪಳ: ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಬಿಸಿಲಿನ ಧಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜಾನುವಾರಗಳ ದಾಹ ಹೇಳತೀರದು. ಜಿಲ್ಲೆಯಾದ್ಯಂತ ನೀರಿಲ್ಲದೇ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ನೀರಿಗಾಗಿ ಬಿಡಾಡಿ ದನಗಳು ಪರದಾಡುವ ಸ್ಥಿತಿ ಉಂಟಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳದ ತಹಶೀಲ್ದಾರ್ ಕಚೇರಿ ಬಳಿ ಹಸುವೊಂದು ಪೈಪ್‍ನಿಂದ ಬೀಳುತ್ತಿರುವ ಹನಿ ನೀರಿಗಾಗಿ ನಾಲಿಗೆ ಚಾಚಿ ದಾಹ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ.








