Recent Posts

Sunday, September 13, 2026
ಸುದ್ದಿ

ಸುಳ್ಯದ ತೊಡಿಕಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆ – ಕಹಳೆ ನ್ಯೂಸ್

ಸುಳ್ಯ: ತೊಡಿಕಾನ ಗ್ರಾಮದ ಕಲ್ಲಂಬಳ ಬಳಿ ಮಂಗನ ಶವವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಂಗನ ಶವವನ್ನು ಸ್ಥಳೀಯರ ಸಹಕಾರದಿಂದ ದಹನ ಮಾಡಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಂಗನ ಶವ ಸಂಪೂರ್ಣ ಕೊಳೆತು ಹೋಗಿದ್ದು, ವಿಪರೀತ ವಾಸನೆ ಬರುತ್ತಿತ್ತು.

ದೇಹದ ಅಗತ್ಯ ಭಾಗಗಳು ಕೊಳೆತು ಹೋಗಿರುವುದರಿಂದ ಶವ ಪರೀಕ್ಷೆಗೆ ಸಾಧ್ಯವಾಗದೆ ಇರುವುದರಿಂದ ಅದನ್ನು ಅದೇ ಸ್ಥಳದಲ್ಲಿ ದಹನ ಮಾಡುವಂತೆ ಅಧಿಕಾರಿಗಳು ಸೂಚಿಸಿದರು.

ಸುಳ್ಯ ತಾಲೂಕಿನಲ್ಲಿ ಎಲ್ಲಿಯೂ ಇದುವರೆಗೆ ಮಂಗನ ಕಾಯಿಲೆಯ ಲಕ್ಷಣಗಳು ಅಥವಾ ಮಂಗಗಳು ಸತ್ತಿರುವುದು ಕಂಡು ಬಂದಿಲ್ಲ. ಇದೀಗ ಮಂಗ ಬೇರೆ ಯಾವುದೋ ಕಾರಣಗಳಿಂದ ಸತ್ತಿರುವ ಸಾಧ್ಯತೆಗಳು ಇದೆ.

ಮಂಗನ ಕಾಯಿಲೆಯಿಂದ ಸತ್ತಿರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.