ನಿಡ್ಪಳ್ಳಿಯಲ್ಲಿ ರಾಜವೈಭವ ಧರೆಗಿಳಿದಿದೆ ; ಇದು ಶಾಂತದುರ್ಗೆಯ ಸಾನಿಧ್ಯ ವಿಶೇಷ ಬ್ರಹ್ಮಕಲಶೋತ್ಸವದಲ್ಲಿ ಒಡಿಯೂರು ಶ್ರೀ – ಕಹಳೆ ನ್ಯೂಸ್

ನಿಡ್ಪಳ್ಳಿ : ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯುತ್ತಿದ್ದು ೮ನೇ ದಿನದ ಧಾರ್ಮಿಕ ಸಭೆಯು ಪ್ರಮೋದ್ ಅರಿಗ ನಿಡ್ಪಳ್ಳಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನಿಡ್ಪಳ್ಳಿ ಭಾಗಕ್ಕೆ ಬಂದಾಗ ರಾಜ ವೈಭವವನ್ನು ನೋಡಿದಂತಾಗುತ್ತದೆ ಶಾಂತದುರ್ಗಾ ದೇವರ ಬ್ರಹ್ಮಕಲಶೋತ್ಸವವು ಬಹಳ ಅದ್ದೂರಿಯಿಂದ ನಡೆಯುತ್ತಿದೆ. ಧರ್ಮದ ವಿಚಾರದಲ್ಲಿ ಭಾರತವನ್ನು ವಿಶ್ವ ಧರ್ಮದ ಚಾವಡಿ ಎಂದರೆ ತಪ್ಪಾಗಲಾರದು ಇಲ್ಲಿ ಧರ್ಮದ ಬಗ್ಗೆ ಆಚಾರ ವಿಚಾರವನ್ನು ಪಾಲಿಸುವ ಜನರು ಅಧಿಕ. ಇನ್ನು ವಿಶೇಷವೆಂದರೆ ಈ ನಿಡ್ಪಳ್ಳಿ ಗ್ರಾಮ ಹಿಂದೆ ನಿಧಿಪಳ್ಳ ಎಂದು ಯಾಕೆ ಆಗಿರಬಾರದು ಯಾಕಂದ್ರೆ ಇಲ್ಲಿನ ಭಕ್ತರೆ ಇಲ್ಲಿನ ನಿಧಿಗಳು. ಉತ್ತಮ ಮನಸ್ಸಿನ ಜನರು ವಾಸಿಸುತ್ತಿರುವ ಊರು ನಿಡ್ಪಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಡ್ಪಳ್ಳಿ ಕ್ಷೇತ್ರದ ಬ್ರಹ್ಮಕಶೋತ್ಸವದಲ್ಲಿ ಸಹಕರಿಸಿದ ಅನೇಕ ದಾನಿಗಳನ್ನು ಗೌರವಿಸಿ ಸನ್ಮಾನಿಲಾಯಿತ್ತು.
ಈ ಕಾರ್ಯಕ್ರಮಕ್ಕೆ ಬಂದಾಗ ತುಂಬಾ ಖುಷಿಯಾಯ್ತು ಯಾಕೆಂದರೆ ದೇವಾಲಯಕ್ಕೆ ಆಗಮಿಸುವ ದಾರಿಯ ಕೆಲ ಕಿಲೋಮೀಟರ್ ಹಿಂದಿನಿಂದಲೆ ದಾರಿಪೂರ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಹಿಂದೂ ಧರ್ಮದ ಕೇಸರಿ ಧ್ವಜವು ಇಲ್ಲಿ ರಾರಜಿಸುತ್ತಿತ್ತು. ಹಿಂದೂ ಧರ್ಮವನ್ನು ಉಳಿಸಲು ಧರ್ಮಜಾಗೃತಿಯನ್ನು ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಸಂಸ್ಕೃತಿಗೆ ಗೌರವ ನೀಡಬೇಕು. ಪ್ರತಿ ಇಂಚು ಇಂಚು ಮಣ್ಣಿಗೂ ಗೌರವ ನೀಡಬೇಕು ಎಂದು ಧಾರ್ಮಿಕ ಮುಖಂಡರು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಶ್ರಮಸಿದ ಗಣ್ಯರಿಗೆ ಸನ್ಮಾನಿಸಲಾಯಿತ್ತು.

ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿಡ್ಪಳ್ಳಿ ಊರು ಸುತ್ತಮುತ್ತದಿಂದ ಶೃಂಗಾರವಾಗಿದ್ದು ದೇವಾಲಯದ ಬಳಿ ವಿಜೃಂಭಣೆಯ ವಾತವರಣ ಸೃಷ್ಠಿಯಾಗಿದೆ. ಇಲ್ಲಿನ ಪ್ರತಿಯೊಂದು ಕೆಲಸವು ಬಹಳ ಸುಸೂತ್ರವಾಗಿ ನಡೆದಿದ್ದು ಅದಕ್ಕೆ ಇಲ್ಲಿನ ಜನರ ಶ್ರಮವೆ ಕಾರಣ. ಮನುಜನ ಪ್ರತಿಯೊಂದು ವಿಚಾರದಲ್ಲಿ ದೇವರ ನೆನಪು ಇರಬೇಕು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಹೇಳಿದರು.









