Recent Posts

Saturday, April 25, 2026
ಸುದ್ದಿ

ಪ್ರೇಮಿಗಳ ದಿನ ಆಚರಿಸಬೇಡಿ, ಅನ್ಯ ಧರ್ಮಿಯರ ಡೇ, ಸಂಸ್ಕೃತಿ ನಮಗೆ ಬೇಡ: ಮುತಾಲಿಕ್ – ಕಹಳೆ ನ್ಯೂಸ್

ಉಡುಪಿ: ಪ್ರೇಮಿಗಳ ದಿನ ಆಚರಿಸಬೇಡಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಉಡುಪಿ ನಗರದಲ್ಲಿ ಮಾತನಾಡಿದ ಅವರು, ಅನ್ಯ ಧರ್ಮಿಯರ ‘ಡೇ’ ಸಂಸ್ಕೃತಿ ನಮಗೆ ಬೇಡ. ಪ್ರೇಮಿಗಳ ದಿನಾಚರಣೆ ಬದಲು ತಂದೆ ತಾಯಿಯನ್ನು ಪೂಜಿಸಿ. ಈ ಬಗ್ಗೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ.

ಪ್ರೇಮಿಗಳ ದಿನಕ್ಕೆ ಅವಕಾಶ ಬೇಡವೆಂದು ಮನವಿ ಮಾಡಿ ಪ್ರೇಮಿಗಳ ದಿನದ ಬಗ್ಗೆ ದುರ್ಗಾಸೇನೆ ಮೂಲಕ ಜಾಗೃತಿ ಮೂಡಿಸುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಂದು ಪೊಲೀಸರೊಂದಿಗೆ ನಾವೂ ಕೈಜೋಡಿಸುತ್ತೇವೆ. ಪಾರ್ಕ್, ರಸ್ತೆಗಳಲ್ಲಿ ಯಾವುದೇ ಕೃತ್ಯ ಕಂಡರೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.