Recent Posts

Saturday, April 25, 2026
ಸುದ್ದಿ

8 ವರ್ಷದ ಪೋರನ ವಿಭಿನ್ನ ಅಭಿಮಾನ: ರಶ್ಮಿಕಾಗೆ ಅಭಿಮಾನಿಯ ಪುಟ್ಟ ಪತ್ರ – ಕಹಳೆ ನ್ಯೂಸ್

ನಾನೆಂದು ಭೇಟಿಯಾಗುವೆನೋ ಆಗ ನಿಮ್ಮನ್ನು ನಾನು ತಬ್ಬಿಕೊಳ್ಳಬೇಕು ಎನಿಸಿದೆ” ಹೀಗಂತ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಯೊಬ್ಬ ಪತ್ರ ಬರೆದಿರುವುದು ಈಗ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ.

ಅಮೆರಿಕಾ ರಶ್ಮಿಕಾ ಮಂದಣ್ನ ಫ್ಯಾನ್ ಕ್ಲಬ್ ತನ್ನ ಟ್ವೀಟ್ ನಲ್ಲಿ ಪುಟ್ಟ ಅಭಿಮಾನಿಯ ಈ ಪತ್ರವನ್ನು ಹಂಚಿಕೊಂಡಿದೆ. “ರಶ್ಮಿಕಾ ಅವರಿಗೆ ನ್ಯೂಯಾರ್ಕ್ನ ಪುಟ್ಟ ಅಭಿಮಾನಿಯೊಬ್ಬರು ಚಿಕ್ಕ ಪತ್ರವನ್ನು ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆತನಿಗೆ ಇನ್ನೂ 8 ವರ್ಷ. ನೀವು ಅವನ ಮೊದಲ ಕ್ರಶ್ ಆಗಿದ್ದೀರಿ. ಅವನು ನೀವು ಅಭಿನಯಿಸಿದ “ಗೀತ ಗೋವಿಂದಂ” ಚಿತ್ರ ನೋಡಿದ್ದು ಅದರ ಹಾಡುಗಳನ್ನು ವೀಕ್ಷಿಸಿದ್ದಾನೆ. ಅವನಿಗೆ ನಿಮ್ಮನ್ನು ಭೇಟಿಯಾಗಬೇಕು, ಹಾಯ್ ಹೇಳಬೇಕೆಂದು ಭಾರೀ ಆಸೆ ಇದೆ ಅಂತ ಫ್ಯಾನ್ ಕ್ಲಬ್ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿ ಹೇಳಿದೆ.