Monday, April 27, 2026
ಸುದ್ದಿ

ಫೆ. 6 ರಿಂದ 15 ರವರೆಗೆ ರಾಜ್ಯ ಬಜೆಟ್ ಅಧಿವೇಶನ – ಕಹಳೆ ನ್ಯೂಸ್

ಭಾರೀ ಕುತೂಹಲ ಕೆರಳಿಸಿರುವ ರಾಜ್ಯ ಬಜೆಟ್ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಫೆಬ್ರವರಿ 6 ರಿಂದ ಫೆಬ್ರವರಿ 15 ರವರೆಗೆ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ.

ನಾಳೆ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ಡಾ. ವಜೂಭಾಯ್ ವಾಲಾ ಅವರು ಭಾಷಣ ಮಾಡಲಿದ್ದಾರೆ. ನಾಡಿದ್ದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಫೆಬ್ರವರಿ ೮ರಂದು 2019-20 ರ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಆದಾದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಆವಕಾಶ ಮಾಡಿಕೊಡಲಾಗಿದೆ. ಫೆಬ್ರವರಿ ೧೫ರಂದು ಸಮ್ಮಿಶ್ರ ಸರ್ಕಾರ, ಬಜೆಟ್‌ಗೆ ಎರಡು ಸದನದಲ್ಲೂ ಅನುಮೋದನೆ ಪಡೆಯಲಿದೆ.