Monday, October 12, 2026
ಸುದ್ದಿ

ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘MITK AI VISION 24H’ ರಾಷ್ಟ್ರಮಟ್ಟದ ಹ್ಯಾಕಥಾನ್ ಸಮಾರೋಪ – ಕಹಳೆ ನ್ಯೂಸ್

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT Kundapura) ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘MITK AI VISION 24H’ 24-ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್‌ನ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಜಾಹೀರಾತು

ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ಗಣ್ಯರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಕಾಂವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ, “24 ಗಂಟೆಗಳ ನಿರಂತರ ಪರಿಶ್ರಮದಲ್ಲಿ ಸ್ಪರ್ಧಿಗಳು ಪ್ರದರ್ಶಿಸಿದ ತಾಂತ್ರಿಕ ಜ್ಞಾನ ಮತ್ತು ಸಮಸ್ಯೆಗಳಿಗೆ ರೂಪಿಸಿದ ಕೃತಕ ಬುದ್ಧಿಮತ್ತೆ (AI) ಆಧಾರಿತ ಮಾದರಿಗಳು ಅತ್ಯಂತ ಪ್ರಶಂಸನೀಯ. ವಿದ್ಯಾರ್ಥಿಗಳಲ್ಲಿನ ನಾವೀನ್ಯತೆ ಹಾಗೂ ಸೃಜನಶೀಲ ಚಿಂತನೆಗಳು ಭವಿಷ್ಯದ ತಂತ್ರಜ್ಞಾನ ಲೋಕಕ್ಕೆ ದೊಡ್ಡ ಕೊಡುಗೆ ನೀಡಲಿವೆ” ಎಂದು ಮೆಚ್ಚುಗೆ ಸೂಚಿಸಿದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಪ್ರತಿಕ್ರಿಯೆ ಹಂಚಿಕೊಂಡು, ಸ್ಪರ್ಧೆಯ ಆಯೋಜನೆ, ತಾಂತ್ರಿಕ ಸೌಲಭ್ಯಗಳು ಹಾಗೂ ಆತಿಥ್ಯ ಅತ್ಯುತ್ತಮವಾಗಿದ್ದು, ಹೊಸ ಅನುಭವ ಮತ್ತು ಕಲಿಕೆಗೆ ಇದು ಉತ್ತಮ ವೇದಿಕೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ, “ಸೋಲು-ಗೆಲುವು ಕೇವಲ ಫಲಿತಾಂಶ ಮಾತ್ರ; ಆದರೆ ನಿರಂತರ ಪರಿಶ್ರಮ, ತಂಡದ ಸಹಭಾಗಿತ್ವ ಮತ್ತು ಹೊಸತನವನ್ನು ಕಲಿಯುವ ಉತ್ಸಾಹವೇ ಯಶಸ್ಸಿನ ಮೂಲ. ತಾಂತ್ರಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸುತ್ತವೆ” ಎಂದು ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.

ನಂತರ ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಪ್ರಥಮ ಸ್ಥಾನ ಪಡೆದ ಟೀಮ್ CBS2 ಚೇತನ್ ಬಿಸಿನೆಸ್ ಸ್ಕೂಲ್, ಹುಬ್ಬಳ್ಳಿ ಇವರಿಗೆ 25000 ನಗದು, ದ್ವಿತೀಯ ಸ್ಥಾನ ಪಡೆದ ಟೀಮ್ ಅವೆಂಜಿನಿಯರ್ಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಇವರಿಗೆ 15000 ನಗದು , ತೃತೀಯ ಸ್ಥಾನ ಟೀಮ್ ಆಲ್ಫಾ3 ATME ಕಾಲೇಜ್ ಆಫ್ ಇಂಜಿನಿಯರಿಂಗ್, ಮೈಸೂರು ಇವರಿಗೆ 10000 ನಗದು ಜೊತೆಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ರಾಷ್ಟ್ರಮಟ್ಟದ ಹ್ಯಾಕಥಾನ್‌ಗೆ ಐಐಟಿ ಧಾರವಾಡ (IIT Dharwad), ಕಾಂವಾಲ್ಟ್ (Commvault), ಕರ್ನಾಟಕ ಸರ್ಕಾರದ ಸ್ಟಾರ್ಟ್‌ಅಪ್ ಕರ್ನಾಟಕ ಬೆಂಬಲಿತ ನ್ಯೂ ಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ (NAIN) ಹಾಗೂ ಕಾಲೇಜಿನ ಇಂಕುಬೇಶನ್ ಸೆಂಟರ್ ಉದ್ಯಮ್ ಎಕ್ಸ್ (UDYAM X) ಸಂಸ್ಥೆಗಳು ಪ್ರಮುಖ ಈವೆಂಟ್ ಪಾರ್ಟ್ನರ್‌ಗಳಾಗಿ (Event Partners) ಕೈಜೋಡಿಸಿ ತಾಂತ್ರಿಕ ಹಾಗೂ ನಾವೀನ್ಯತೆಯ ಸಹಯೋಗವನ್ನು ನೀಡಿದ್ದವು.

ಕಾರ್ಯಕ್ರಮದ ಕೊನೆಯಲ್ಲಿ ಹ್ಯಾಕಥಾನ್ ಯಶಸ್ವಿಯಾಗಲು ಸಹಕರಿಸಿದ ಅತಿಥಿಗಳು, ತೀರ್ಪುಗಾರರು, ಪ್ರಾಯೋಜಕರು, ಮಾರ್ಗದರ್ಶಕರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ ರಾಮಣ್ಣ ಲಮಣಿ ಇವರು ಧನ್ಯವಾದ ಅರ್ಪಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕರುಣ ಗೌಡ ಹಾಗೂ ಅಲಿಶಾ ಕಾರ್ಯಕ್ರಮ ನಿರೂಪಿಸಿದರು.