ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಯವರ ಮಾರ್ಗದರ್ಶನ ದಲ್ಲಿ ಪಾಂಗಾಳ ದಲ್ಲಿ ಸ್ವಚ್ಚತಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಾಪು : ನಮ್ಮ ದೇಶವು ಸ್ವಚ್ಛ ವಾಗಿರ ಬೇಕು ನಾವೆಲ್ಲರೂ ಅಂತರ್ಯ ದಿಂದಲೂ ಸ್ವಚ್ಛ ವಾಗಿರಬೇಕು, ಈ ದೇಶ ದ ಸೇವೆ ಯೊಂದಿಗೆ ನಾವೆಲ್ಲರೂ ಪ್ರಗತಿ ಪರ ಸ್ವಚ್ಛ ಜೀವನ ಮಾಡಬೇಕು, ತನ್ನ ಕಾಪು ಕ್ಷೇತ್ರ ದಲ್ಲಿ ಹಲವಾರು ಕಡೆ ಸ್ವಚ್ಚ ತಾ ಕಾರ್ಯಕ್ರಮ ಕ್ಕೆ ಅವಕಾಶ ಮಾಡಿಕೊಟ್ಟ ಶಾಸಕರು ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ನಡೆಸುತ್ತಿರುವ ಸ್ವಚ್ಚ ತಾ ಕಾರ್ಯಕ್ರಮ ಕ್ಕೆ ಮಾರ್ಗದರ್ಶನ ನೀಡುತ್ತಾ ಶುಭ ಹಾರೈಸಿದರು ಪಾಂಗಾಳದ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಮತ್ತು ಪಾಂಗಾ ಳ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಈ ಅಭಿಯಾನದಲ್ಲಿ ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀ ಜಿತೇಂದ್ರ ಶೆಟ್ಟಿ ಉದ್ಯಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಅಲೆವೂರು, ಬಿಜೆಪಿ ಯುವಮೋರ್ಚಾ ಮಂಡಲ ಪ್ರಭಾರಿಗಳಾದ ಸಂತೋಷ್ ಸುವರ್ಣ ಬೊಳ್ಜೆ ,ಬಿಜೆಪಿ ಕಾಪು ಮಂಡಲ ಕಾರ್ಯದರ್ಶಿ ಕೇಸರಿ ಯುವರಾಜ್ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ , ಬಿಜೆಪಿ ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ , ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಶೆಟ್ಟಿ ಮಟ್ಟಾರು,ಸೇರಿದಂತೆ ಪಕ್ಷದ ಪ್ರಮುಖರಾದ ನಾಗೇಶ್ ಭಂಡಾರಿ, ಸಂದೀಪ್ ಮಜೂರು,ರವಿ ಸಾಲಿಯಾನ್ ಪಡುಕರೆ ,ವಿರಾಜ್ ಪೊಲಿಪು, ಶೇಖರ್ ಪೂಜಾರಿ,ಶೈಲೇಶ್ ಶೆಟ್ಟಿ , ಗಿರೀಶ್ ಕುಮಾರ್ ಸುಧೀಂದ್ರ ಶೆಟ್ಟಿ ಹಾಗೂ ಉತ್ಸಾಹಿ ಕಾರ್ಯಕರ್ತರು ಭಾಗವಹಿಸಿದ್ದರು.










