Recent Posts

Wednesday, September 30, 2026
ಸುದ್ದಿ

ಸೆಕೆಂಡ್ ಲೀಡ್: ರಾಮ ಸೇನೆ ಹಾಗೂ ಶ್ರೀರಾಮ ಸೇನೆ ಒಗ್ಗೂಡುವಿಕೆ , ಒಂದೇ ಬ್ಯಾನರ್ ಅಡಿಯಲ್ಲಿ ಸಂಘಟನೆ ಬಲವರ್ಧನೆ: ಪ್ರಮೋದ್ ಮುತಾಲಿಕ್ – ಕಹಳೆ ನ್ಯೂಸ್

ಮಂಗಳೂರು : ಅನಾರೋಗ್ಯದಿಂದ ಬಳಲುತ್ತಿರುವ ರಾಮ ಸೇನೆಯ ನಾಯಕ ಪ್ರಸಾದ್ ಅತ್ತಾವರ ಅವರನ್ನು ಭೇಟಿಯಾಗಿ ಕ್ಷೇಮ ವಿಚಾರಿಸಿದ್ದು, ಈ ವೇಳೆ ಸಂಘಟನಾತ್ಮಕ ವಿಷಯಗಳ ಕುರಿತು ದೀರ್ಘ ಚರ್ಚೆ ನಡೆಸಲಾಗಿದೆ. ಇನ್ಮುಂದೆ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ. ಇಡೀ ರಾಜ್ಯಾದ್ಯಂತ ‘ಶ್ರೀರಾಮ ಸೇನೆ’ ಎಂಬ ಒಂದೇ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತರು ಒಗ್ಗೂಡಿ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದು ಮುತಾಲಿಕ್ ಪ್ರಕಟಿಸಿದರು.

ಜಾಹೀರಾತು

​ಜಂಟಿ ರಾಜ್ಯ ಪ್ರವಾಸ: ಪ್ರಸಾದ್ ಅತ್ತಾವರ ಅವರ ಆರೋಗ್ಯ ಚೇತರಿಸಿಕೊಂಡ ನಂತರ ಇಬ್ಬರೂ ಸೇರಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸಲಿದ್ದೇವೆ. ರಾಮ ಸೇನೆಯ ರಾಜ್ಯ ಪದಾಧಿಕಾರಿಗಳೂ ಸಹ ಈ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಪ್ರಸ್ತುತ ದೇಶ ಹಾಗೂ ರಾಜ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದುತ್ವ ಸಂಘಟಕರು ಹಾಗೂ ಕಾರ್ಯಕರ್ತರು ಒಗ್ಗೂಡಬೇಕಾದ ಅಗತ್ಯವಿದೆ. ಇದು ಯಾವುದೇ ಸ್ಪರ್ಧಾತ್ಮಕ ನಿರ್ಧಾರವಲ್ಲ, ಬದಲಾಗಿ ಸಮಾನ ಮನಸ್ಕರು ಒಂದಾಗಿ ಕೆಲಸ ಮಾಡುವ ನಿರ್ಧಾರವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು