Recent Posts

Wednesday, September 30, 2026
ಸುದ್ದಿ

ಅ.11 ರಿಂದ ಅ.21ರವರೆಗೆ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ – ಕಹಳೆ ನ್ಯೂಸ್

ಅ.11 ರಿಂದ ಅ.21ರವರೆಗೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೋಗ್ರು ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.
ಶ್ರೀ ವನದುರ್ಗಾ ದೇವಿ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಶುಭಾನುಗ್ರಹಗಳೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಉತ್ಸವಾದಿ ಕಾರ್ಯಕ್ರಮಗಳು ನಡೆಯಲಿದೆ.

ಜಾಹೀರಾತು

ಕಾರ್ಯಕ್ರಮಗಳ ವಿವರ
ಅ.1ರಿಂದ ಅ.21ರವರೆಗೆ ಪ್ರತಿದಿನ ಬೆಳಗ್ಗೆ 7.30ರಿಂದ ನಿತ್ಯಪೂಜೆ, ಮಂಗಳಾರತಿ ಬಳಿಕ 8.30ರಿಂದ ಶ್ರೀ ಚಂಡಿಕಾಹೋಮ ಹಾಗೂ ಸರ್ವಾಲಂಕಾರ ಪೂಜೆ, ಸರ್ವಸೇವೆ-ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ 7.30 ರಿಂದ ಶ್ರೀದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ, ರಾತ್ರಿ ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಲಿದೆ. ಅ.11ರಂದು ಗಣಪತಿ ಹೋಮ ಹಾಗೂ ನವರಾತ್ರಿ ಪೂಜಾರಂಭಗೊಂಡು ಸಂಜೆ 6.00ರಿಂದ ವಿದುಷಿ ಶ್ರೀಮತಿ ವೀಣಾ ರಾಘವೇಂದ್ರ ಇವರ ಶಿಷ್ಯೆ ಕು| ಅಂಕಿತಾ ಬಿ. ಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ.

ಅ.12ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ವನದುರ್ಗಾ ಹವನ ಹಾಗೂ ಸಂಜೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇವರಿಂದ ಭಜನೆ ನಡೆಯಲಿದೆ.

ಅ.13ರಂದು ಸಂಜೆ ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ಭಜನ್ ಸಂಧ್ಯಾ ಹಾಗೂ ಅ.14ರಂದು ಸಂಜೆ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್ ಇವರ ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.), ಪುತ್ತೂರು ಪ್ರಸ್ತುತ ಪಡಿಸುವ “ನೃತ್ಯ್ಸೋಹಂ” ನಡೆಯಲಿದೆ. ಅ.15ರಂದು ಬೆಳಗ್ಗೆ ಲಲಿತಾ ಪಂಚಮಿ ಹಾಗೂ ಸಂಜೆ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಕಲ್ಲಡ್ಕ ಇವರ ಕಲಾನಿಕೇತನ ಡಾನ್ಸ್ ಫೌಂಡೇಶನ್ (ರಿ.) ಕಲ್ಲಡ್ಕದವರಿಂದ ಭರತ ನೃತ್ಯ ಸಿಂಚನ ನಡೆಯಲಿದೆ.

ಅ.16ರಂದು ಸಂಜೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಯಕ್ಷರಂಜಿನಿ ಇದರ ಸಹಯೋಗದಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಸಹಯೋಗದಲ್ಲಿ “ಸುದರ್ಶನ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಅ.17ರಂದು ಗಾಳಿಮನೆ, ಯಕ್ಷಸಂಸ್ಕೃತಿ ಬಳಗ ಪ್ರಸ್ತುತಿಯವರಿಂದ ತಾಳಮದ್ದಳೆ – ಅಖ್ಯಾನ – ತತ್ವ ದರ್ಶನ ನಡೆಯಲಿದೆ. ಅ.18ರಂದು ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಇವರಿಂದ ತಾಳಮದ್ದಳೆ ನಡೆಯಲಿದೆ. ಅ.19ರಂದು ದುರ್ಗಾಷ್ಠಮಿ ಬಳಿಕ ಸಂಜೆ ಶ್ರೀ ವನದುರ್ಗಾ ಭಕ್ತವೃಂದ ಇವರಿಂದ ತಾಳಮದ್ದಳೆ ನಡೆಯಲಿದೆ. ಅ.20ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ ನಡೆಯಲಿದ್ದು, ಸಂಜೆ ನೃತ್ಯ ಮೋಹಕಂ ನಾಟ್ಯನಿಲಯಂ ಗುರು ಕಲಾ ತಪಸ್ವಿ ಬಾಲಕೃಷ್ಣ ಮಂಜೇಶ್ವರ ಇವರ ನೃತ್ಯ ತಂಡದವರಿAದ ಶಾಸ್ತ್ರೀಯ ಹಾಗೂ ಜನಪದ ನೃತ್ಯ ವೈಭವ ನಡೆಯಲಿದೆ. ಅ.21ರಂದು ವಿಜಯದಶಮಿ, ವಿದ್ಯಾರಂಭ ಹಾಗೂ ಸಂಜೆ ಚಿಟ್ಟಾಣಿ ಕಲಾ ಪ್ರತಿಷ್ಠಾನ (ರಿ.) ಹೊನ್ನಾವರ ಇವರಿಂದ ಬ್ರಹ್ಮ ಕಪಾಲ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.