Tuesday, September 29, 2026
ಸುದ್ದಿ

ದೇಶೀಯ ಸೇವಾಭಾರತಿ ಕಾಸರಗೋಡಿಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ ಎಡನೀರು ಶ್ರೀಗಳು- ಕಹಳೆ ನ್ಯೂಸ್

ಪರಮಪೂಜ್ಯ ಸ್ವಾಮೀಜಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀಯವರ ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭದ ಅಂಗವಾಗಿ ಜರುಗಿದ “ಮಂಗಳೋತ್ಸವ 2026” ರಲ್ಲಿ, ಸಮಾಜದ ಗಮನವು ಇನ್ನಷ್ಟು ಸೇವಾ ಕಾರ್ಯಗಳತ್ತ ಕೇಂದ್ರೀಕೃತವಾಗಬೇಕು ಎಂಬ ಮಹತ್ವದ ಸಂದೇಶವನ್ನು ಜಗತ್ತಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇಶೀಯ ಸೇವಾಭಾರತಿ ಕಾಸರಗೋಡಿಗೆ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ. ಟಿ. ದಿನೇಶ್ ಅವರಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು

ಕಾರ್ಯಕ್ರಮದಲ್ಲಿ ಕಾಸರಗೋಡು ಲೋಕಸಭಾ ಸದಸ್ಯರಾದ ಶ್ರೀ ರಾಜ್‌ಮೋಹನ್ ಉಣ್ಣಿತ್ತಾನ್, ಸೇವಾಭಾರತಿ ರಾಜ್ಯ ಸಮಿತಿ ಸದಸ್ಯೆ ಸಂಗೀತಾ ವಿಜಯನ್, ಕನ್ನಡ ಚಲನಚಿತ್ರರಂಗದ ಹಿರಿಯ ನಟ ಶ್ರೀ ನೀರನಳ್ಳಿ ರಾಮಕೃಷ್ಣ, ಕಾಸರಗೋಡಿನ ಪ್ರಸಿದ್ಧ ಸಂಗೀತಜ್ಞ ವಿದ್ವಾನ್ ಶ್ರೀ ಕಲ್ಮಾಡಿ ಸದಾಶಿವ ಆಚಾರ್ಯ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಶ್ರೀ ಟಿ. ಶ್ಯಾಮ್ ಭಟ್, ಕಮಲಾಕ್ಷನ್ ಹಾಗೂ ಪ್ರತಿಕ್ ಆಳ್ವ (ಸೇವಾಭಾರತಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು