Monday, September 28, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ನಮಾಮಿ ಭಾರತ ಕಾರ್ಯಕ್ರಮದ ಪ್ರಯುಕ್ತ ವಂದೇ ಮಾತರಂ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ- ಕಹಳೆ ನ್ಯೂಸ್

ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ನಮಾಮಿ ಭಾರತ ಕಾರ್ಯಕ್ರಮದ ಪ್ರಯುಕ್ತ ವಂದೇ ಮಾತರಂ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಲಾಯಿತು. ವಂದೇ ಮಾತರಂ ರಾಷ್ಟ್ರಗೀತೆಯ ಮಹತ್ವವನ್ನು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ರಮೇಶ್ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಕೋಶಾಧಿಕಾರಿಗಳಾದ ಶ್ರೀ ಸತೀಶ್ ಶಿವಗಿರಿ ಪದವಿ ಪೂರ್ವ ವಿಭಾಗದ ಮಾತೃ ಭಾರತಿಯ ಸದಸ್ಯರಾದ ಮಮತ, ಹರ್ಷಿತಾ, ಶ್ವೇತಾ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಪದ್ಮನಾಭ, ಪ್ರಾಂಶುಪಾಲರಾದ ಶ್ರೀವಸಂತ ಬಲ್ಲಾಳ್‍ರವರು ಉಪಸ್ಥಿತರಿದ್ದರು. 754 ಮಂದಿ ಸಾಮೂಹಿಕವಾಗಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ
ಕು.ಪ್ರಣಮ್ಯ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು