Sunday, September 27, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಫ್ರೆಂಡ್ಸ್ ತೆಕ್ಕಾರು ವಿಭಾಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್

ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಇದರ ಆಶ್ರಯದಲ್ಲಿ ನಡೆಯುವ 2026-27ನೇ ಸಾಲಿನ ತೆಕ್ಕಾರು ಟೈಗರ್ಸ್ ಕಾರ್ಯಕ್ರಮಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ತೆಕ್ಕಾರು ಟೈಗರ್ಸ್  ನ ಅಧ್ಯಕ್ಷರಾದ ತುಲಸಿ.ವಿ.ಕೋಟ್ಯಾನ್ ಬೇನಪ್ಪು ಇವರ ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ತೆಕ್ಕಾರು ಇಲ್ಲಿ ನಡೆಯಿತು.

ಜಾಹೀರಾತು

ನವರಾತ್ರಿಯ ಪ್ರಯುಕ್ತ 5ನೇ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಗೌರವ ಸಲಹೆಗಾರರಾಗಿ ಹರೀಶ್ ಪೂಂಜಾ ಮಾನ್ಯ ಶಾಸಕರು ಬೆಳ್ತಂಗಡಿ, ಡಿ ಕಿರಣ್ ಚಂದ್ರ ಪುಷ್ಪಗಿರಿ ಧಾರ್ಮಿಕ ಮುಖಂಡರು, ನಟೇಶ್ ಪೂಜಾರಿ ಉದ್ಯಮಿಗಳು ಬೆಂಗಳೂರು, ಹರೀಶ್ ಪೂಜಾರಿ ನಿರಾಳ ಉದ್ಯಮಿಗಳು ಉಪ್ಪಿನಂಗಡಿ, ರಾಜಾರಂ ಕೆ ಬಿ ದಂತ ವೇದ್ಯರು ಉಪ್ಪಿನಂಗಡಿ, ಅಣ್ಣು ಪೂಜಾರಿ ಬಾಗ್ಲೋಡಿ ಟ್ರಸ್ಟಿಗಳು, ಶ್ರೀ ಗೋಪಾಲಕೃಷ್ಣ ದೇವಸ್ಥಾನ ತೆಕ್ಕಾರು.
ಅಧ್ಯಕ್ಷರಾಗಿ ತುಲಸಿ.ವಿ.ಕೋಟ್ಯಾನ್ ಬೇನಪ್ಪು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಆನಲ್ಕೆ, ರಂಜಿತ್ ಗೌಡ ಪಿಲಿಬೈಲು, ಸಂದೀಪ್ ಕುಪ್ಪೆಟ್ಟಿ, ಸತೀಶ್ ಗೌಡ ಪಿಲಿಗೂಡು, ಭರತ್ ಪೂಜಾರಿ ಬೇನಪ್ಪು ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ ಪೂಜಾರಿ ಮುಜ್ಜಾಲೆ, ಯೋಗೀಶ್ ವಿದ್ಯಾಪುರ. ಜೊತೆ ಕಾರ್ಯದರ್ಶಿಗಳಾಗಿ ಜಯರಾಜ್ ಬಾಜಾರ, ಪ್ರದೀಪ್ ಪೂಜಾರಿ ವಂದಾಯ. ಕೋಶಧಿಕಾರಿಗಳಾಗಿ ಪ್ರಹ್ಲಾದ್ ಗೌಡ ವಾಟೆತಳ, ವಿಕ್ರಮ್ ವಿದ್ಯಾಪುರ. ಪ್ರಚಾರ ಮತ್ತು ಮಾಧ್ಯಮ ಸಂಚಾಲಕರಾಗಿ ಶ್ರೀಕಾಂತ್ ಶೆಟ್ಟಿ ಇಳಂತಿಲ. ಕಾನೂನು ಸಲಹೆಗಾರರಾಗಿ ಹಿತೇಶ್ ಶೆಟ್ಟಿ ವಿದ್ಯಾಪುರ. ಸಾಮಾಜಿಕ ಜಾಲತಾಣ ನಿರ್ವಹಣಾ ಸಂಚಾಲಕರಾಗಿ ದೇವಿಪ್ರಸಾದ್ ಪೂಜಾರಿ ಬೇನಪ್ಪು, ಅಭಿಷೇಕ್ ವಿದ್ಯಾಪುರ, ಚಂದನ್ ಗೌಡ ಪಿಲಿಬೈಲು, ಸುದರ್ಶನ್ ಗೌಡ ಪಿಲಿಬೈಲು. ಪ್ರಧಾನ ಸಂಚಾಲಕರಾಗಿ ಕಿರಣ್ ರಾಜ್ ಬೇನಪ್ಪು, ಸುರೇಶ್ ಮರಮ ಪುಳಿತ್ತಡಿ, ದಿವಾಕರ ಅದಮ, ಮೋಹಿತ್ ಸಾಲಿಯಾನ್ ಮುಗ್ಗ, ದಿನೇಶ್ ಮಲೆಕೋಡಿ, ಚರಣ್ ರಾಜ್ ಬೇನಪ್ಪು ಆಯ್ಕೆಯಾಗಿರುತ್ತಾರೆ.