Sunday, September 27, 2026
ಸುದ್ದಿ

ಅಕ್ಷಯ ಕಾಲೇಜಿನ ಮಾನವ ಹಕ್ಕುಗಳ ಕ್ಲಬ್, ಐ ಕ್ಯೂ ಎ ಸಿ ಸಹಯೋಗದಲ್ಲಿ ಗ್ರಾಹಕ ಹಕ್ಕುಗಳ ರಕ್ಷಣೆ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಕಾಲೇಜಿನ ಮಾನವ ಹಕ್ಕುಗಳ ಕ್ಲಬ್, ಐ ಕ್ಯೂ ಎ ಸಿ ಸಹಯೋಗದಲ್ಲಿ ಗ್ರಾಹಕ ಹಕ್ಕುಗಳ ರಕ್ಷಣೆ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿತು. ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ವಕೀಲರಾದ ಶ್ರೀ ಚಿದಾನಂದ ಬೈಲಾಡಿ ಅವರು ಭಾಗವಹಿಸಿದ್ದರು. ಗ್ರಾಹಕರ ಮೂಲಭೂತ ಹಕ್ಕುಗಳಾದ ಸುರಕ್ಷತೆಯ ಹಕ್ಕು ಹಾಗೂ ಮಾಹಿತಿ ಪಡೆಯುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಶಿಕ್ಷಣದ ಹಕ್ಕುಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಲಬೆರಕೆ, ನಕಲಿ ವಸ್ತುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಮತ್ತು ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ವಹಿಸಿದ್ದ ಪ್ರಾಂಶುಪಾಲರಾದ ಕೆ .ಪಕ್ಕಳ ಅವರು ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಹಲವಾರು ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ವಸ್ತುಗಳ ಕಳಪೆ ಗುಣಮಟ್ಟದಿಂದ ಮೋಸ ಹೋಗುವ ಸಾಧ್ಯತೆ ಇದೆ. ಸಮರ್ಪಕ ಕಾನೂನಿನ ಅರಿವಿಲ್ಲದೇ ನಷ್ಟ ಅನುಭವಿಸುವುದು ಸಾಮಾನ್ಯ ಈ ದೃಷ್ಟಿಕೋನದಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯ ಅರಿವು ಗಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಮುಖ್ಯಸ್ಥರಾದ ಅಶೋಕ ರೈ, ಐಕ್ಯೂ ಎಸಿ ಸಂಯೋಜಕೀ ರಶ್ಮಿ. ಕೆ .ಮಾನವ ಹಕ್ಕುಗಳ ಕ್ಲಬ್ ನ ಸಂಯೋಜಕಿ ಹರ್ಷಿತ ಎನ್ ಎಂ, ಉಪಸ್ಥಿತರಿದ್ದರು.

ಜಾಹೀರಾತು

ಅಂತಿಮ ಪದವಿ ವಿದ್ಯಾರ್ಥಿನಿ ಕುಮಾರಿ ಕೋಮಲಾಕ್ಷಿ ಸ್ವಾಗತಿಸಿ, ಇತಿಹಾಸ ಉಪನ್ಯಾಸಕರಾದ ಗಂಧರ್ವ ವಂದಿಸಿದರು. ದ್ವಿತೀಯ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು