Sunday, September 27, 2026
ಸುದ್ದಿ

ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯ ವಿಧ್ಯಾರ್ಥಿ ಕಾವ್ಯ ವಿಹಾರ – ಕಹಳೆ ನ್ಯೂಸ್

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ದ. ಕ.ಜಿಲ್ಲಾ ಸಾಹಿತ್ಯ ಸಮಿತಿ ಬಂಟ್ವಾಳ ತಾಲೂಕು ಸಾಹಿತ್ಯ ಸಮಿತಿ ಹಾಗೂ ಪ್ರತಿಭಾ ರಾಮ ಸಾಹಿತ್ಯ ಸಂಘ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಸಹಯೋಗದಿಂದ ವಿಧ್ಯಾರ್ಥಿ ಕವಿಗೋಷ್ಠಿ  ನಡೆಯಿತು .ಮೊದಲ ಅವಧಿಯಲ್ಲಿ ವಿಧ್ಯಾರ್ಥಿ ಕಾವ್ಯ ವಿಹಾರವನ್ನು ದ . ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ .ವಾಣಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಕನ್ನಡ ಭಾಷೆಯನ್ನು ಬೆಳೆಸುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳು ಸಾಹಿತ್ಯ ಬರೆಯುವ ಕಲೆಯನ್ನು ರೂಢಿ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಮೌಲ್ಯಯುತವಾದ ಕಥೆ ಕವನಗಳು ಹೊರಬಂದು ಕನ್ನಡ ಸಾಹಿತ್ಯ ಲೋಕ ಸಂಪತ್ ಬರಿತವಾಗುವುದು ಎಂದರು .ಮುಖ್ಯ ಅತಿಥಿಯಾಗಿ ಶ್ರೀ ರಾಮ ಪದವಿ
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಯತಿರಾಜ್ ಮಾತನಾಡಿ ವಿದ್ಯಾರ್ಥಿ ಕವಿಗೋಷ್ಠಿ ವಿದ್ಯಾರ್ಥಿಗಳಿಗೆ ತನ್ನ ಪ್ರತಿಭೆ ಯನ್ನು ಅನಾವರಣ ಗೊಳಿಸಲು  ಸಮರ್ಥ ವೇದಿಕೆಯಾಗಿದೆ ವಿದ್ಯಾರ್ಥಿಗಳು ಸರಿಯಾಗಿ ಇದರ ಸದುಪಯೋಗ ಪಡೆಯಬೇಕು ಎಂದರು.

ಜಾಹೀರಾತು

ವಿದ್ಯಾರ್ಥಿ ಕಾವ್ಯ ವಿಹಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ನಿವೃತ ಅಧ್ಯಾಪಕರಾದ ಶ್ರೀ ವಿ. ಬಿ . ಕುಲಮರ್ವ ರವರು ಕಥೆ,ಕಾವ್ಯ,ಕವನ ಬರೆಯುವಾಗ ಅನುಸರಿಸಬೇಕಾದ ವಿಧಾನ ಛಂದಸ್ಸು, ಶಬ್ದಗಳ ಬಳಕೆ ವಿಷಯಗಳ ಪ್ರಸ್ತಾವನೆ ಇತ್ಯಾದಿ ವಿಷಯಗಳ ಬಗ್ಗೆ ಯುವ ಕವಿಗಳಿಗೆ ಮಾರ್ಗದರ್ಶನ ಮಾಡಿದರು
ಕವಿಗೋಷ್ಠಿಯಲ್ಲಿ ವಿದ್ಯಾಕೇಂದ್ರದ ಒಟ್ಟು 19 ವಿದ್ಯಾರ್ಥಿಗಳು ತಾನು ಬರೆದ ಕವನಗಳನ್ನು ವಾಚಿಸಿ ಸಂಭ್ರಮಿಸಿದರು ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀ ವಸಂತ ಬಲ್ಲಾಳ್ ಉಪಸ್ಥಿತರಿದ್ದರು , ಜಿಲ್ಲಾ ಸಾಹಿತ್ಯ ಸಮಿತಿಯ ಲತೇಶ್ ಬಾಕ್ರಬೈಲ್ ಸ್ವಾಗತಿಸಿ ಪ್ರತಿಭಾ ರಾಮ ಸಾಹಿತ್ಯ ಸಂಘದ ನಿರ್ದೇಶಕ ರಮೇಶ್ ವಂದಿಸಿ , ವಿದ್ಯಾರ್ಥಿಗಳಾದ ನಿನಾದ ಮತ್ತು ತ್ರಿಷಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಕವಿಗೋಷ್ಠಿ ಯಲ್ಲಿ ಭಾಗವಹಿಸಿದ ಎಲ್ಲಾ ಬಾಲ ಕವಿಗಳನ್ನು ಶಾಲು ಹೊದಿಸಿ. ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು