(ಡಿ.8) :ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪುತ್ತೂರು ದೀಪೋತ್ಸವ : ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ರೈ, ಜಿ.ಎಲ್.ಬಲರಾಮ ಆಚಾರ್ಯ, ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು..!-ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಧಾರ್ಮಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರುವ ನಿಟ್ಟಿನಲ್ಲಿ ಡಿ.8ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ’ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಅಚಾರ್ಯ, ಅಧ್ಯಕ್ಷರಾಗಿ ಸಾಮಾಜಿಕ ಧುರೀಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ದೇರ್ಲ ಕರುಣಾಕರ ರೈ, ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್‌ನ ಆಯುರ್ವೇದ ತಜ್ಞ ಡಾ.ಹರಿಕೃಷ್ಣ ಪಾಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಧ್ಯಾಪಕರೂ ಆಗಿರುವ ದೈವ ನರ್ತಕ ಡಾ|ರವೀಶ್ ಪಡುಮಲೆ, ಸಂಚಾಲಕರಾಗಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಕೋಶಾಧಿಕಾರಿಯಾಗಿ ಯಸ್.ದಾಮೋದರ ಪಾಟಾಳಿ, ಜೊತೆ ಕಾರ್ಯದರ್ಶಿಯಾಗಿ ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಿಇಒ ಜಯಪ್ರಕಾಶ್ ರೈ ಚೆಲ್ಯಡ್ಕ, ಸಹಕೋಶಾಧಿಕಾರಿಯಾಗಿ ಶ್ರೀಧರ್ ತೆಂಕಿಲ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾಗಿರುವ ನಿವೃತ್ತ ಎಸ್ಪಿ ರಾಮದಾಸ್ ಗೌಡ ನೆಲ್ಲಿಕಟ್ಟೆ, ರೋಟರಿ ಕ್ಲಬ್‌ನ ಜಗಜೀವನ್‌ದಾಸ್ ರೈ, ನೇಮಾಕ್ಷ ಸುವರ್ಣ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ರವಿ ಅಚಾರ್ಯ, ಚೇತನ್ ಉಪ್ಪಳಿಗೆ, ವಿರೂಪಾಕ್ಷ ಭಟ್, ಡಾ.ಗೋಪಾಲಕೃಷ್ಣಎಂ, ಪದ್ಮಾಸೋಲಾರ್‌ನ ಮಾಲಕ ಪದ್ಮನಾಭ ಶೆಟ್ಟಿ, ಉಪೇಂದ್ರ ಬಲ್ಯಾಯ ದೇವಸ್ಯ, ನಿತಿನ್ ಪಕ್ಕಳ, ರಂಜಿತ್ ಬಂಗೇರ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಡಾ|ರಾಜೇಶ್ ಬೆಜ್ಜಂಗಳ, ಜಗನ್ನೋಹನ್ ರೈ ಸೂರಂಬೈಲು, ಜೈರಾಜ್ ಭಂಡಾರಿ ನೋಣಾಲುಗುತ್ತು, ಪ್ರವೀಣ್ ಭಂಡಾರಿ, ಜಯಾನಂದ ಎಂ, ಮನೋಜ್ ಟಿ.ವಿ ಬೆದ್ರಾಳ, ಸದಾಶಿವ ಪೈ ದರ್ಬೆ, ರಾಧಾಕೃಷ್ಣ ಬೋರ್ಕರ್, ಕಿರಣ್ ಶೆಟ್ಟಿ ಪೆರ್ನೆ, ಆದರ್ಶ ಶೆಟ್ಟಿ ಉಪ್ಪಿನಂಗಡಿ, ಮನೋಹರ್ ಪಾಟಾಳಿ, ಮನ್ಮಥ ಶೆಟ್ಟಿ, ಶೇಖರ್ ಬ್ರಹ್ಮನಗರ, ಪವಿತ್ರ ರೈ ಬಾಳಿಲ, ವಾಸುದೇವ ಸಾಲ್ಯಾನ್, ರಮೇಶ್ ಪಜಿಮಣ್ಣು, ಸುಧಾಕರ್ ಕುಲಾಲ್, ಗೋಪಾಲಕೃಷ್ಣ ಭಟ್ ಶ್ರೀನಿಧಿ ದರ್ಬೆ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಇತ್ತೀಚೆಗಷ್ಟೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗಿತ್ತು.
ಪುತ್ತೂರು ದೀಪೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 11 ಗಂಟೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ತೆಂಕು ಮತ್ತು ಬಡಗು ತಿಟ್ಟುಗಳ ಕಲಾ ವೈಭವವನ್ನು ಒಟ್ಟುಗೂಡಿಸುವ ವಿಶೇಷ ಕಾರ್ಯಕ್ರಮ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದ್ದು ‘ಬ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಪಟ್ಲ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಭಾಗವತಿಕೆ ಪ್ರಮುಖ ಆಕರ್ಷಣೆಯಾಗಲಿದೆ.
ಸಂಜೆ ಗಂಟೆ 6ಕ್ಕೆ ಧರ್ಮ ಸಭೆ ನಡೆಯಲಿದ್ದು, ರಾತ್ರಿ ಗಂಟೆ 8ರಿಂದ ಖ್ಯಾತ ಸಂಗೀತ ಕಲಾವಿದ ಡಾ|ವಿದ್ಯಾಭೂಷಣ್ ಮತ್ತು ಅವರ ಪುತ್ರಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ತಿಳಿಸಿದ್ದಾರೆ.










