ಆ.25ರಂದು ಪುತ್ತೂರು ಬಂದ್‌ಗೆ ವಿಹಿಂಪ ಬಜರಂಗದಳ ಸಂಪೂರ್ಣ ಬೆಂಬಲ – ಕಹಳೆ ನ್ಯೂಸ್

ಪುತ್ತೂರು: ನಗರದ ದರ್ಬೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಆ.25ರ ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಪೂರ್ಣ ಬೆಂಬಲ ಘೋಷಿಸಿದೆ.
ದರ್ಬೆ ಘಟನೆಯಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ, ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಸಾರ್ವಜನಿಕ ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಬೆಳವಣಿಗೆಗಳನ್ನು ಖಂಡಿಸಿ ಬಂದ್‌ಗೆ ಬೆಂಬಲ ನೀಡುತ್ತಿರುವುದಾಗಿ ಸಂಘಟನೆ ತಿಳಿಸಿದೆ.
ಆ.25ರಂದು ಪುತ್ತೂರು ನಗರದಾದ್ಯಂತ ಅಂಗಡಿ–ಮುಂಗಟ್ಟುಗಳು ಸೇರಿದಂತೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಬಂದ್‌ಗೆ ಸಹಕರಿಸುವಂತೆ ವಿಹಿಂಪ–ಬಜರಂಗದಳ ಮನವಿ ಮಾಡಿದೆ.
ಪುತ್ತೂರಿನ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಸಂಘಟನೆ ಕರೆ ನೀಡಿದೆ.











