ಗ್ರೇಟರ್ ನೋಯ್ಡಾದದಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸುವಾಗ ಕಾರ್ಖಾನೆ ಗೋಡೆ ಕುಸಿತ : ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಹುತಾತ್ಮ – ಕಹಳೆ ನ್ಯೂಸ್

ಲಕ್ನೋ: ಗ್ರೇಟರ್ ನೋಯ್ಡಾದ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಾಗ ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆ.
ತಡರಾತ್ರಿ ಇಕೋಟೆಕ್-3 ಕೈಗಾರಿಕಾ ಪ್ರದೇಶದ ಐಎಲ್‌ಜಿಐಎಂ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಆರು ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಬೆಂಕಿ ನಂದಿಸುವಾಗ ಕಾರ್ಖಾನೆಯ ಗೋಡೆ ಹಾಗೂ ಬೃಹತ್ ಕಬ್ಬಿಣದ ಕಂಬಿ ಉರುಳಿ ಬಿದ್ದಿದೆ. ಇದರಿಂದ ಐವರು ಸಿಬ್ಬಂದಿ ಗಾಯಗೊಂಡಿದ್ದರು. ಅಲ್ಲದೇ ಅಗ್ನಿಶಾಮಕ ವಾಹನ ಸಹ ಜಖಂ ಆಗಿದೆ.
ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ರೋಹಿತ್ ಯಾದವ್ ಮತ್ತು ಹೆಡ್ ಕಾನ್‌ಸ್ಟೆಬಲ್ ಚಾಲಕ ತಿರತ್‌ಪಾಲ್ ಸಾವಿಗೀಡಾದರು.











