
ಬೀಜಿಂಗ್: ಶೂ ರಾಜಧಾನಿ ಎಂದೇ ಹೆಸರಾದ ಆಗ್ನೇಯ ಚೀನಾದ ಜಿಂಜಿಯಾಂಗ್‌ನ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಗ್ನಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಖಾನೆಯಿಂದ ಭಾರೀ ಪ್ರಮಾಣದ ಹೊಗೆ ಎದ್ದಿರುವುದು ದಾಖಲಾಗಿದೆ. ಅಲ್ಲದೇ ಛಾವಣಿ ಮೇಲೆ ಜನರು ಸಿಲುಕಿರುವುದು ಸೆರೆಯಾಗಿದೆ. ಈ ಅವಘಡದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಬೆಂಕಿ ಹೊತ್ತಿಕೊಂಡಾಗ ಕಾರ್ಖಾನೆಯಲ್ಲಿ ಸುಮಾರು 240 ಜನರಿದ್ದರು. ಅದರಲ್ಲಿ ಹಲವರು ನಾಪತ್ತೆಯಾಗಿದ್ದಾರೆ. 200 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನೂರಾರು ರಕ್ಷಣಾ ಕಾರ್ಯಕರ್ತರು ಜನರ ರಕ್ಷಣೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ.









