
ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ಕರಾವಳಿಯ ಅರಬ್ಬಿ ಸಮುದ್ರದ ಬಳಿ ಭಾರಿ ಪ್ರಮಾಣದ ಸರಕು ಸಾಗಣೆ ಮಾಡುತ್ತಿದ್ದ ಕಾರ್ಗೋ ವಿಮಾನವೊಂದು ನಿಗೂಢವಾಗಿ ನಾಪತ್ತೆಯಾಗಿದೆ.
ವಿಮಾನವು ರೇಡಾರ್ ಸಂಪರ್ಕದಿಂದ ಕಡಿತಗೊಂಡ ತಕ್ಷಣವೇ ಎಚ್ಚೆತ್ತ ಪಾಕಿಸ್ತಾನಿ ರಕ್ಷಣಾ ಸಂಸ್ಥೆಗಳು ಮತ್ತು ನೌಕಾಪಡೆ ಜಂಟಿಯಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ಐವರು ಸಿಬ್ಬಂದಿಯಿದ್ದ ಬೋಯಿಂಗ್ 737 ವಿಮಾನವು ಮಂಗಳವಾರ ರಾತ್ರಿ ಯುಎಇಯ(UAE) ಶಾರ್ಜಾದಿಂದ ಟೇಕಾಫ್ ಆಗಿತ್ತು. ಎರಡು ಗಂಟೆ ಹಾರಾಟ ನಡೆಸಿದ ಬಳಿಕ ಪಾಕಿಸ್ತಾನದ ಕರಾಚಿ ಕರಾವಳಿಯಲ್ಲಿ ರೇಡಾರ್‌ನಿಂದ ಕಣ್ಮರೆಯಾಗಿದೆ.









