ಜಾಗತಿಕ ಹವಾಮಾನ ಬದಲಾವಣೆಗೆ ಚೀನಾ ಬಿಗ್ ಪ್ಲಾನ್: ಬಿಡುಗಡೆಯಾಯ್ತು ‘ಬ್ಯೂಟಿಫುಲ್ ಚೀನಾ’ ಮಹಾ ಮಾರ್ಗಸೂಚಿ -ಕಹಳೆ ನ್ಯೂಸ್

ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಚೀನಾ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ತನ್ನ ದೇಶವನ್ನು ಸಂಪೂರ್ಣ ಹಸಿರುಮಯವಾಗಿಸುವ ಮಹತ್ವಾಕಾಂಕ್ಷೆಯ “ಬ್ಯೂಟಿಫುಲ್ ಚೀನಾ” ಕಾರ್ಯಕ್ರಮದ ಅಧಿಕೃತ ಮಾರ್ಗಸೂಚಿಯನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿದೆ.
ಆರ್ಥಿಕ ಪ್ರಗತಿಯ ಜೊತೆಜೊತೆಗೇ ಪ್ರಕೃತಿಯನ್ನು ರಕ್ಷಿಸುವ “ಹಸಿರು ಉತ್ಪಾದನೆ ಮತ್ತು ಸುಸ್ಥಿರ ಜೀವನಶೈಲಿ”ಯನ್ನು ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ತರಲು ಚೀನಾದ ಸ್ಟೇಟ್ ಕೌನ್ಸಿಲ್ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಹಸಿರು ಇಂಧನಕ್ಕೆ ಆದ್ಯತೆ ಸೌರ ಮತ್ತು ಪವನ ಶಕ್ತಿಯಂತಹ ಪಳೆಯುಳಿಕೆ ರಹಿತ ಇಂಧನಗಳ ಬಳಕೆಗೆ ಹೆಚ್ಚಿನ ಒತ್ತು*. *200 ‘ಶೂನ್ಯ-ತ್ಯಾಜ್ಯ’ ನಗರಗಳು ಕಸ ಮುಕ್ತ ಹಾಗೂ ಮರುಬಳಕೆ ಆಧಾರಿತ ನಗರಗಳ ಸಂಖ್ಯೆಯನ್ನು ಸದ್ಯ ಇರುವ 113 ರಿಂದ 200 ಕ್ಕೆ ಹೆಚ್ಚಿಸುವ ಗುರಿ ಶುದ್ಧ ಗಾಳಿ ಮತ್ತು ಜಲಮೂಲಗಳ ರಕ್ಷಣ* ನಗರಗಳಲ್ಲಿ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ಗಾಳಿಯ ಗುಣಮಟ್ಟ ಸುಧಾರಿಸುವುದು ಹಾಗೂ ನದಿ, ಸರೋವರ, ಸಮುದ್ರ ತೀರಗಳ ಜಲಮೂಲಗಳನ್ನು ಕಟ್ಟುನಿಟ್ಟಾಗಿ ಶುದ್ಧೀಕರಿಸುವುದು.
*ಮಾಲಿನ್ಯ ನಿಯಂತ್ರಣ: ಕೈಗಾರಿಕಾ ತ್ಯಾಜ್ಯ ಹಾಗೂ ಮಣ್ಣಿನ ಮಾಲಿನ್ಯವನ್ನು ಸಂಪೂರ್ಣ ನಿಯಂತ್ರಿಸುವುದು ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ.* ಕಾಡುಗಳ ಬೆಳವಣಿಗೆ ಮತ್ತು ಜೀವವೈವಿಧ್ಯದ ಸಂರಕ್ಷಣೆಗೆ ವಿಶೇಷ ಯೋಜನೆ.
ನಗರಗಳಲ್ಲಿ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ಗಾಳಿಯ ಗುಣಮಟ್ಟ ಸುಧಾರಿಸುವುದು ಹಾಗೂ ನದಿ, ಸರೋವರ, ಸಮುದ್ರ ತೀರಗಳ ಜಲಮೂಲಗಳನ್ನು ಕಟ್ಟುನಿಟ್ಟಾಗಿ ಶುದ್ಧೀಕರಿಸುವುದು.
ಮಾಲಿನ್ಯ ನಿಯಂತ್ರಣ: ಕೈಗಾರಿಕಾ ತ್ಯಾಜ್ಯ ಹಾಗೂ ಮಣ್ಣಿನ ಮಾಲಿನ್ಯವನ್ನು ಸಂಪೂರ್ಣ ನಿಯಂತ್ರಿಸುವುದು ಮತ್ತು ಇಂಗಾಲದ ಡೈಆಕ್
ಚೀನಾದ ಈ ಬೃಹತ್ ಯೋಜನೆ ಇಡೀ ವಿಶ್ವಕ್ಕೇ ಮಾದರಿಯಾಗಿದ್ದು, ನೆರೆಹೊರೆಯ ರಾಷ್ಟ್ರವಾಗಿ ಭಾರತವೂ ಸಹ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇನ್ನಷ್ಟು ಮಹತ್ವದ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತ ಈಗಾಗಲೇ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ಹೆಚ್ಚುತ್ತಿರುವ ನಗರೀಕರಣ, ವಾಯು ಮಾಲಿನ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಚೀನಾದ ಮಾದರಿಯಲ್ಲೇ ಭಾರತವೂ ಸಹ ಸ್ಥಳೀಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಹೊಣೆಗಾರಿಕೆಯನ್ನು ನಿಗದಿಪಡಿಸಿ, ‘ಶೂನ್ಯ-ತ್ಯಾಜ್ಯ’ ನಗರಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಅಭಿವೃದ್ಧಿಯ ಜೊತೆಗೆ ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭಾರಿ ಗಂಡಾಂತರ ಕಾದಿದೆ ಎಂಬುದನ್ನು ಮನಗಂಡು, ಭಾರತ ಸರ್ಕಾರವೂ ಇಂತಹದ್ದೇ ಒಂದು ಕ್ರಾಂತಿಕಾರಕ ಮಹಾ ಮಾರ್ಗಸೂಚಿಯನ್ನು ದೇಶಾದ್ಯಂತ ಜಾರಿಗೆ ತರಬೇಕಿದೆ.









