Thursday, April 23, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಡೆಲ್ಲಿ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB : ಚಿನ್ನಸ್ವಾಮಿಯಲ್ಲಿಂದು ಆರ್‌ಸಿಬಿಯ 100ನೇ ಪಂದ್ಯ -ಕಹಳೆ ನ್ಯೂಸ್

ಬೆಂಗಳೂರು: ಪ್ರತಿ ಐಪಿಎಲ್ ಸೀಸನ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡುವ ರೂಢಿಯಿದೆ. ಅಂದರಂತೆ ಇಂದು (ಏ.18) ಡೆಲ್ಲಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಪ್ರತಿ ಆವೃತ್ತಿಯಲ್ಲಿಯೂ ಗ್ರೀನ್ ಜೆರ್ಸಿ ಧರಿಸುವ ಮೂಲಕ ಆರ್‌ಸಿಬಿ ತಂಡ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದರ ಇನ್ನೊಂದು ವಿಶೇಷತೆಯೆಂದರೆ ಆಟಗಾರರು ಧರಿಸಿರುವ ಎಲ್ಲಾ ಜೆರ್ಸಿಗಳು ಮರುಬಳಕೆಯಾಗಬಲ್ಲ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕೆನ್ನುವ ದೃಷ್ಟಿಯಿಂದ 2011ರಿಂದಲೂ ಆರ್‌ಸಿಬಿ ತಂಡ ಆವೃತ್ತಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುವುದು ವಾಡಿಕೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಆರ್‌ಸಿಬಿ ಕೂಡ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆವೃತ್ತಿಯ ವಿಶೇಷ ದಿನವಿಂದು. ಆಟಗಾರರು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿನ್ನಸ್ವಾಮಿಯಲ್ಲಿ ಆಡುತ್ತಿರುವ 100ನೇ ಪಂದ್ಯ ಇದಾಗಿದೆ. ಸಂಪ್ರದಾಯಕ್ಕಿಂದ ಇದೊಂದು ಹೆಮ್ಮೆ ಎಂದು ತಿಳಿಸಿ

ಈವರೆಗೆ ಆರ್‌ಸಿಬಿ 5 ಪಂದ್ಯಗಳನ್ನಾಡಿದ್ದು, ಈ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದಿರಿಸಿಕೊಂಡಿದೆ.