Friday, April 24, 2026
ಸುದ್ದಿ

ಆತ್ರಾಡಿ: ಟೆಂಪೋ- ಬೈಕ್ ಮಧ್ಯೆ ಭೀಕರ ಅಪಘಾತ- ಸವಾರ ಮೃತ್ಯು- ಕಹಳೆ ನ್ಯೂಸ್

ಉಡುಪಿ: ಟೆಂಪೋ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆತ್ರಾಡಿ ಕಬ್ಯಾಡಿಯ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಹೆರ್ಗಾ ಗ್ರಾಮದ ಭಾಸ್ಕರ್ ನಾಯಕ್ (70) ಎಂದು ಗುರುತಿಸಲಾಗಿದೆ. ಟೆಂಪೋ ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಬೈಕ್ ನ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು