Friday, June 19, 2026
ಸುದ್ದಿ

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ : ಅಂತಿಮ ಹಂತಕ್ಕೆ ಎಸ್‌ಐಟಿ ತನಿಖೆ-ಕಹಳೆ ನ್ಯೂಸ್

ಬೆಂಗಳೂರು: ಉದ್ಯಮಿ ಸಿ.ಜೆ ರಾಯ್  ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಪೊಲೀಸ್ ಕಮಿಷನರ್‌ಗೆ ವರದಿ ಸಲ್ಲಿಸಲಿದೆ.

ಜಾಹೀರಾತು
ಜಾಹೀರಾತು
ಸಿ.ಜೆ ರಾಯ್ ಆತ್ಮಹತ್ಯೆಯ ಹಿಂದಿನ ಸತ್ಯ ಎಸ್‌ಐಟಿ ವರದಿಯಿಂದ ಬಯಲಾಗುವ ಸಾಧ್ಯತೆ ಇದೆ. ಎಸ್‌ಐಟಿ ನಾಲ್ಕು ಪ್ರಮುಖ ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಐಟಿ ದಾಳಿ, ಉದ್ಯಮ ವ್ಯವಹಾರಗಳು, ವ್ಯವಹಾರದಲ್ಲಿನ ಹೂಡಿಕೆಗಳು ಹಾಗೂ ಕೌಟುಂಬಿಕ ವಿಚಾರಗಳಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಈ ಸಂಬಂಧ ಹಲವು ದಾಖಲೆಗಳು ಮತ್ತು ಕಡತಗಳನ್ನು ಎಸ್‌ಐಟಿ ಪರಿಶೀಲಿಸಿದೆ. ಅಲ್ಲದೇ ಕಚೇರಿ ಸಿಬ್ಬಂದಿ, ಅಧಿಕಾರಿಗಳು, ಐಟಿ ಅಧಿಕಾರಿಗಳು ಮತ್ತು ರಾಯ್ ಕುಟುಂಬದ ಸದಸ್ಯರು ಹಾಗೂ ಆಪ್ತರು ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು