Friday, March 6, 2026
ಮುಂಬೈರಾಜ್ಯಸಿನಿಮಾಸುದ್ದಿ

38ನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯನ ಪಯಣಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ -ಕಹಳೆ ನ್ಯೂಸ್

ಮುಂಬಯಿ:  ಬಾಲಿವುಡ್‌ ಚಿತ್ರರಂಗದ ಖ್ಯಾತ ಗಾಯಕ ಅರಿಜಿತ್ ಸಿಂಗ್  ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಫೇಮ್‌ – ನೇಮ್‌ ಕೊಟ್ಟಿದ್ದ  ಹಿನ್ನೆಲೆ ಗಾಯನ ಲೋಕಕ್ಕೆ ಅರಿಜಿತ್‌ ಸಿಂಗ್‌ ದಿಢೀರ್ ವಿದಾಯ ಹೇಳಿದ್ದಾರೆ.

ಭಾರತೀಯ ಸಂಗೀತ ಉದ್ಯಮದಲ್ಲಿ ಪ್ರಮುಖ ಧ್ವನಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಅರಿಜಿತ್‌ ಸಿಂಗ್ ವೃತ್ತಪರ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 38 ವರ್ಷದ ಅರಿಜಿತ್ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷ ಕೇಳುಗರಾಗಿ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಹಿನ್ನೆಲೆ ಗಾಯನ ವೃತ್ತಿಗೆ ವಿದಾಯ ಹೇಳಿದ್ದು, ಸ್ವತಂತ್ರವಾಗಿ ಮ್ಯೂಸಿಕ್‌ ಲೋಕದಲ್ಲಿ ಮುಂದುವರೆಯುವುದಾಗಿ ಅವರು ಹೇಳಿದ್ದಾರೆ. ‌ ಅರಿಜಿತ್‌ ಈಗಾಗಲೇ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ಯಾವುದೇ ಹೊಸ ಯೋಜನೆಯನ್ನು ಅವರು ಒಪ್ಪಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ತನ್ನ ನಿರ್ಧಾರದ ಹಿಂದಿನ ಕಾರಣಗಳನ್ನು ಗಾಯಕ ವಿವರಿಸದಿದ್ದರೂ, ತನ್ನ ಪಯಣ ಸಂಪೂರ್ಣವಾಗಿ ಮುಗಿದಿಲ್ಲವೆಂದು ಅವರು ಹೇಳಿದ್ದಾರೆ.

‌ʼಆಶಿಕಿ 2ʼ (2013) ಚಿತ್ರದ ʼತುಮ್ ಹಿ ಹೋʼ ಹಾಡಿನೊಂದಿಗೆ ಅರಿಜಿತ್ ಸಿಂಗ್ ರಾತ್ರೋರಾತ್ರಿ ಖ್ಯಾತಿಯನ್ನು ಗಳಿಸಿದರು. ಈ ಹಾಡು ಹೊಸ ಪೀಳಿಗೆಯಲ್ಲಿ ಸೆನ್ಸೇಷನಲ್‌ ಕ್ರಿಯೇಟ್‌ ಮಾಡಿತ್ತು. ಆದಾದ ಬಳಿಕ ಅರಿಜಿತ್‌ ಬಾಲಿವುಡ್‌ನ ಬಹುಬೇಡಿಕೆ ಗಾಯಕರಾಗಿ ಗುರುತಿಸಿಕೊಂಡರು,

ʼಏ ದಿಲ್ ಹೈ ಮುಷ್ಕಿಲ್ʼ ,ʼಹವೇಯಿನ್ʼ, ʼಅಪ್ನಾ ಬನಾ ಲೆʼ, ʼವೆ ಮಾಹಿʼ, ʼಸಜ್ನಿʼ, ʼಗೆಹ್ರಾ ಹುವಾʼ ʼಕೇಸರಿಯಾʼ ಹತ್ತಾರು ಹಾಡುಗಳಿಗೆ ಅವರು ಧ್ವನಿಯಾದರು. ಈ ಎಲ್ಲಾ ಹಾಡುಗಳು ಇಂದಿಗೂ ಸೂಪರ್‌ ಹಿಟ್‌ ಲಿಸ್ಟ್‌ನಲ್ಲಿವೆ.

ಅವರ ಹಾಡಿಗೆ ಬಂದಿರುವ ಪ್ರಶಸ್ತಿ – ಪುರಸ್ಕಾರ ಹಲವಿದೆ. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ʼಪದ್ಮಾವತ್ʼ (2018) ಚಿತ್ರದ ʼಬಿಂತೆ ದಿಲ್ʼಗಾಗಿ ಮತ್ತು 70ನೇ ಆವೃತ್ತಿಯಲ್ಲಿ ʼಬ್ರಹ್ಮಾಸ್ತ್ರ: ಭಾಗ ಒಂದು – ಶಿವʼ (2022) ಚಿತ್ರದ ʼಕೇಸರಿಯಾʼಗಾಗಿ ಎರಡು ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಜನವರಿ 2025ರಲ್ಲಿ, ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಇತ್ತೀಚೆಗೆ ಅರಿಜಿತ್‌ ಸಿಂಗ್‌ ಅವರು, ಸಲ್ಮಾನ್‌ ಖಾನ್‌ ಅವರ ʼಬ್ಯಾಟಲ್ ಆಫ್ ಗಾಲ್ವಾನ್‌ʼನ ʼಮಾತೃಭೂಮಿʼ ಹಾಡಿಗೆ ಧ್ವನಿಯಾಗಿದ್ದಾರೆ.