Thursday, September 10, 2026
ಜಿಲ್ಲೆಬೆಂಗಳೂರುರಾಜ್ಯ

ಕೋಗಿಲು ಪ್ರಕರಣ: ಬಂಧಿತರು 14 ದಿನಗಳ ಕಾಲ ಪೊಲೀಸ್‌ ವಶಕ್ಕೆ – ಕಹಳೆ ನ್ಯೂಸ್

ಬೆಂಗಳೂರು : ಯಲಹಂಕ ಕೋಗಿಲು ಲೇಔಟ್‌ ಸಮೀಪ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಜಮೀನು ಕಬಳಿಕೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಇಬ್ಬರು ಆರೋ ಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.

ಜಾಹೀರಾತು

ಲೇಔಟ್‌ ನಲ್ಲಿ ಸ್ಥಳೀಯರಿಂದ ಹಣ ಪಡೆದು ಅನಧಿ ಕೃತವಾಗಿ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿಜಯ್‌, ವಾಸಿಂ ಉಲ್ಲಾ ಬೇಗ್‌, ಮುನಿ ಆಂಜನಪ್ಪ ಹಾಗೂ ರಾಬೀನ್‌ ಎಂಬುವರು ವಿರುದ್ಧ ಪ್ರಕರಣ ದಾಖಲಿಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಲಹಂಕ ಠಾಣೆ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ವಿಜಯ್‌ ಹಾಗೂ ವಾಸಿಂ ಉಲ್ಲಾ ಬೇಗ್‌ ಅವರನ್ನು ಬಂಧಿಸಿದ್ದರು.

ಆರೋಪಿಗಳನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಆರೋಪಿಗಳಾದ ವಾಸಿಂ ಹಾಗೂ ವಿಜಯ್‌ ಸ್ಥಳೀಯ ನಿವಾಸಿಗಳಿಂದ 4 ಲಕ್ಷ ರೂ.ನಿಂದ 7 ಲಕ್ಷ ರೂ.ವವರೆಗೂ ಹಣ ಪಡೆದು ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ. ಅಲ್ಲದೆ ಹಕ್ಕುಪತ್ರಗಳನ್ನು ಕೂಡ ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆ ನಿರ್ಮಾಣ ಸಂಬಂಧ ಇಬ್ಬರನ್ನು ಬಂಧಿಸಿದ ನಂತರ ಮೂರನೇ ಬಂಧನದ ಬಗ್ಗೆ ಪೊಲೀಸರು ಸುಳಿವು ನೀಡಿದ್ದಾರೆ.

ಯಲಹಂಕದ ಕೋಗಿಲು ಬಡಾವಣೆಯ ವಾಸಿಂ ಲೇಔಟ್‌, ಫಕೀರ್‌ಲೇಔಟ್‌ ಹಾಗೂ ಓಲ್ಡ್ ಫಕೀರ್‌ಲೇಔಟ್‌ನಲ್ಲಿ ಸರ್ಕಾರಿ ಜಮೀನು ಕಬಳಿಕೆ ಮತ್ತು ಒತ್ತುವರಿಯಾಗಿದೆ. ತನಿಖೆ ವೇಳೆ ಆರೋಪಿಗಳು ಜಾಗ ಕೊಡಿಸುತ್ತೇವೆಂದು ಹಲವರ ಬಳಿ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ನೀಡಿರುವುದರ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ಜನರಿಂದ ಹಣ ಪಡೆದಿದ್ದಾರೆ, ಯಾವ ದಾಖಲೆಗಳನ್ನು ನಕಲಿ ಮಾಡಲಾಗಿದೆ ಎಂದು ತನಿಖೆ ಮಾಡುತ್ತಿದ್ದೇವೆ. ಯಾರೆಲ್ಲ ವಂಚನೆಗೊಳಗಾದವರಿಗೆ ದೂರು ನೀಡಲು ಹೇಳಿದ್ದೇವೆ. ಆ ದೂರಿನ ಆಧಾರದಲ್ಲಿ ತನಿಖೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.