ಮದುವೆಯಾಗಿ ಮೂರೇ ತಿಂಗಳಿಗೆ ನವ ವಿವಾಹಿತೆ ಆತ್ಮಹತ್ಯೆ : ಪತಿಯ ಕುಟುಂಬದ ವಿರುದ್ದ ದೂರು!-ಕಹಳೆ ನ್ಯೂಸ್

ಅಂದ್ರಹಳ್ಳಿಯಲ್ಲಿ ಅಮೂಲ್ಯ ವಾಸವಿದ್ದು, ವಿದ್ಯಾಮಾನ್ಯ ನಗರದಲ್ಲಿ ಅಭಿಶೇಕ್ ವಾಸವಿದ್ದರು. ಅಕ್ಕಪಕ್ಕದ ಏರಿಯಾದಲ್ಲಿ ಇವರಿಬ್ಬನ ನಡುವೆ ಪ್ರೀತಿ ಅಂಕುರಿಸುತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಬುಧವಾರಕ್ಕೆ ಅಮೂಲ್ಯ ಅಭಿಶೇಕ್ (30) ಇಬ್ಬರೂ ಮದುವೆಯಾಗಿ ಆಗಿ 3 ತಿಂಗಳು ಕಳೆದಿತ್ತು. ಆದರೆ ಏಕಾಏಕಿ ಅಭಿಶೇಕ್ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ.
ಅಮೂಲ್ಯ ಆತ್ಮಹತ್ಯೆಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅಭಿಶೇಕ್ ಕುಟುಂಬದವರೇ ನಮ್ಮ ಮಗಳ ಸಾವಿಗೆ ಕಾರಣ ಎಂದು ಅಮೂಲ್ಯ ಕುಟುಂಬದವರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











