Friday, April 24, 2026
ಬೆಂಗಳೂರುರಾಜ್ಯಸುದ್ದಿ

ದೇಗುಲದೊಳಗೆ ನುಗ್ಗಿ ದೇವರ ಮೂರ್ತಿಗೆ ಚಪ್ಪಲಿ ಕಾಲಿನಿಂದ ಒದ್ದ ಅನ್ಯಕೋಮಿನ ಯುವಕ -ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ದೇಗುಲದಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ. ದೇವರ ವಿಗ್ರಹಕ್ಕೆ ಚಪ್ಪಲಿ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದಾನೆ.

ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ದೇವರ ಬೀಸನಹಳ್ಳಿಯಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವಿಶೇಷ ಚೇತನ ಕಬೀರ್ ಎಂಬಾತ ಕೃತ್ಯ ಎಸಗಿದ್ದಾನೆ. ಆತನನ್ನು ಸ್ಥಳೀಯರು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ.

ಸ್ಥಳೀಯರು ವಿಚಾರಣೆ ವೇಳೆ ಆತ ಬಾಂಗ್ಲಾದೇಶದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಆತನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಲ್ಲಾ ಹು ಅಕ್ಬರ್ ಎಂದು ಇಸ್ಲಾಂ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ ಆರೋಪಿ ದೇಗುಲದ ಬಳಿ ಇದ್ದ ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಸ್ಟಿಕ್​ನಿಂದ ಹೊಡೆದಿದ್ದನು ನಂತರ ದೇವಸ್ಥಾನದತ್ತ ಓಡಿದ್ದನು. ಬಳಿಕ ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದಾನೆ. ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಆರೋಪಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಯಲಿಸಲಾಗಿದೆ.