Friday, April 24, 2026
ಕುಂದಾಪುರಜಿಲ್ಲೆಸುದ್ದಿ

ಕುಂದೇಶ್ವರ ದೇವಾಲಯ ವಠಾರದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಜತೆಗೂಡಿ ಆರಂಭಿಸಿದ ನೂತನ ದೃಷ್ಟಿ ಯೋಜನೆ ಉದ್ಘಾಟನೆ -ಕಹಳೆ ನ್ಯೂಸ್

ಕುಂದಾಪುರ: ದೃಷ್ಟಿ ಯೋಜನೆ ಜಿಲ್ಲೆಯಲ್ಲಿ 8 ಕಡೆ ಅನುಷ್ಠಾನವಾಗಿದ್ದು ಕುಂದಾಪುರದಲ್ಲಿ ಇನ್ನು ಚಿಕ್ಕನ್‌ಸಾಲ್ ರಸ್ತೆ, ಫೆರ್ರಿರಸ್ತೆಯಲ್ಲಿ ಅನುಷ್ಠಾನವಾಗಲಿದೆ. 50ರಷ್ಟು ಮನೆ, ಅಂಗಡಿ ಇತ್ಯಾದಿಗಳ ಸಮೂಹಕ್ಕೆ ಒಬ್ಬ ಕಾವಲುಗಾರನನ್ನು ನಿಯೋಜಿಸಿ ಅವನ ಮೇಲ್ವಿಚಾರಣೆ ಪೊಲೀಸ್ ಇಲಾಖೆ ನಡೆಸುವ ವ್ಯವಸ್ಥೆ ಇದೆ. ಕಾವಲುಗಾರನ ವೇತನ ಆ ಪರಿಸರದವರು ಒಟ್ಟಾಗಿಸಿ ನೀಡಬೇಕು. ಇದರಿಂದ ಅಪರಾಧ ಚಟುವಟಿಕೆ ಕಡಿಮೆಯಾಗುತ್ತದೆ. ಬೇಗ ಪತ್ತೆಯಾಗುತ್ತದೆ. ಜನರಿಗೆ ಧೈರ್ಯ ಮೂಡುತ್ತದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕುಂದೇಶ್ವರ ದೇವಾಲಯ ವಠಾರದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಜತೆಗೂಡಿ ಆರಂಭಿಸಿದ ನೂತನ ಯೋಜನೆ ದೃಷ್ಟಿ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಕೊಡುಗೆಯಾಗಬಲ್ಲ ಹೊಸ ಯೋಜನೆಗಳ ಅನುಷ್ಠಾನಕ್ಕೆ ಕುಂದಾಪುರದ ಜನತೆಯ ಸಹಕಾರ ಇದ್ದೇ ಇರುತ್ತದೆ.2018ರಲ್ಲಿ ನೇರ ಕಣ್ಗಾವಲಿನ ಸಿಸಿ ಟಿವಿ ಅಳವಡಿಕೆಯ ಸೇಫ್‌ಕುಂದಾಪುರ ಪ್ರಾಜೆಕ್ಟ್ ಆರಂಭಿಸಿದಾಗ ಇಲ್ಲಿನ ಜನ ಬೆಂಬಲ ನೀಡಿದರು. ಈಗ 900 ಕೆಮರಾಗಳ ಲೈವ್ ಮಾನಿಟರಿಂಗ್ ನಡೆಯುತ್ತಿದೆ. ಹತ್ತಾರು ಅಪರಾಧ ಚಟುವಟಿಕೆಗಳನ್ನು ಸ್ಥಳದಲ್ಲೆ ತಡೆಯಲಾಗಿದೆ, ಪತ್ತೆ ಹಚ್ಚಲಾಗಿದೆ. ಉಪವಿಭಾಗ ವ್ಯಾಪ್ತಿಯಲ್ಲಿ ಅನುಷ್ಠಾನವಾದ ಯೋಜನೆ ಈಗ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದರು.

ಉಡುಪಿ ಜಿಲ್ಲೆ ಶಾಂತಿಪ್ರಿಯರ ಜಿಲ್ಲೆಯಾದರೂ ಹೆದ್ದಾರಿ ಹಾದು ಹೋಗುವ ಕಾರಣ ಬೇರೆ ರಾಜ್ಯ, ಜಿಲ್ಲೆಯ ಅಪರಾಧಗಳು ಇಲ್ಲಿ ಅಪರಾಧ ನಡೆಸುತ್ತಾರೆ. ಕೋಟ ಠಾಣೆಯಲ್ಲಿ 33 ಸಿಬಂದಿ ಇದ್ದು 70 ಸಾವಿರ ಜನರ ಯೋಗಕ್ಷೇಮ ನೋಡಬೇಕು. ಆದ್ದರಿಂದ ದೃಷ್ಟಿ ಯೋಜನೆ ಮೂಲಕ ಸಮುದಾಯ ಪೊಲೀಸರ ಜತೆ ಕೈ ಜೋಡಿಸಿದರೆ ಅನುಕೂಲ ಆಗಲಿದೆ ಎಂದರು.

ಜಿಲ್ಲೆಯ 201ಕಡೆ ಜಂಕ್ಷನ್, ಗಡಿ ರಸ್ತೆಗಳನ್ನು ಗುರುತಿಸಲಾಗಿದ್ದು ಅಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸಬಲ್ಲ ಸಾಮರ್ಥ್ಯದ ಹಾಗೂ ಕಣ್ಗಾವಲಿನ ಕೆಮರಾಗಳನ್ನು ಅಳವಡಿಸಲಾಗುವುದು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಸಹಕಾರದಲ್ಲಿ 3 ತಿಂಗಳ ಒಳಗೆ ಈ ಕಾರ್ಯ ನಡೆಯಲಿದ್ದು ನ.1ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಎಲ್ಲ ಮಳಿಗೆಯವರೂ ಸಿಸಿ ಕೆಮರಾ ಅಳವಡಿಸಿ. ಅಪರಾಧ ನಿಯಂತ್ರಿಸಿ ಎಂದರು.
ಟಿಎಪಿಸಿಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಡಿಸಿ ಎಸ್‌ಪಿಗಳು ಜಿಲ್ಲೆಯ ಅಭಿವೃದ್ಧಿಗೆ ಅವರದೇ ಕನಸಿನ ಯೋಜನೆ ಅನುಷ್ಠಾನ ಮಾಡುತ್ತಾರೆ. ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನವಾಗಲಿ ಎಂದರು.

ಪ್ರಸ್ತಾವಿಸಿದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, 60 ಮಳಿಗೆಗಳು, 3 ಬ್ಯಾಂಕ್, 3 ಸೊಸೈಟಿಗಳನ್ನು ಸೇರಿಸಿ ಒಂದು ವಿಭಾಗ ಮಾಡಲಾಗಿದೆ. ಸಮುದಾಯದ ಜತೆಗೂಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧ ಮುಕ್ತ ಜಿಲ್ಲೆಯಾಗಿಸುವುದು ಯೋಜನೆ ಉದ್ದೇಶ ಎಂದರು.

ಕುಂದೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ವಿಎಸ್‌ಎಸ್ ಅಧ್ಯಕ್ಷ ಕೃಷ್ಣಮೂರ್ತಿ ಕುಂದಾಪುರ, ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಉಪಸ್ಥಿತರಿದ್ದರು.

ನಗರ ಠಾಣೆ ಎಸ್‌ಐ ನಂಜಾ ನಾಯ್ಕ್ ಸ್ವಾಗತಿಸಿ, ಸಂಚಾರ ಠಾಣೆ ಎಸ್‌ಐ ನೂತನ್ ವಂದಿಸಿ, ಸಿಬಂದಿ ಮಧುಸೂದನ್ ನಿರ್ವಹಿಸಿದರು.