Thursday, September 10, 2026
ಸುದ್ದಿ

ಸರಿಗಮಪ ಸೀಸನ್ 21ರ ಕಿರೀಟ ತೊಟ್ಟ ಶಿವಾನಿ ಸ್ವಾಮಿ : ರನ್ನರ್‌ ಅಪ್‌ ಆದ ಉಡುಪಿಯ ಆರಾಧ್ಯ ರಾವ್‌ -ಕಹಳೆ ನ್ಯೂಸ್

ನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಅನೇಕ ಸಿಂಗರ್​ಗಳನ್ನು ಕೊಡುಗೆಯಾಗಿ ನೀಡಿದೆ. ಇದೀಗ 21ನೇ ಸೀಸನ್​ನಿಂದ ಇನ್ನಷ್ಟು ಸಿಂಗರ್ಸ್ ಹುಟ್ಟುಕೊಂಡಿದ್ದಾರೆ.

ಜಾಹೀರಾತು

ಈ ಬಾರಿಯ ವಿನ್ನರ್ ಪಟ್ಟ ಬೀದರ್​ನ ಶಿವಾನಿ ಸ್ವಾಮಿಗೆ (Shivani swami) ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್​ ಆಗಿದ್ದರು. ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು.

ಸರಿಗಮಪ ಸೀಸನ್‌ 21 ಕಾರ್ಯಕ್ರಮದಲ್ಲಿ ಟಾಪ್‌ 3 ಹಂತಕ್ಕೆ ಹೋದ ಮೂವರೂ.. ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಟಾಪ್‌ 3 ಹಂತಕ್ಕೆ ಬಂದವರು – ಶಿವಾನಿ ಸ್ವಾಮಿ, ರಶ್ಮಿ ಹಾಗೂ ಆರಾಧ್ಯ ರಾವ್‌. ಈ ಮೂವರ ಪೈಕಿ ಶಿವಾನಿ ಸ್ವಾಮಿ ವಿನ್ನರ್ ಆಗಿದ್ದು, ಆರಾಧ್ಯ ರಾವ್‌ ರನ್ನರ್‌ ಅಪ್‌ ಆಗಿದ್ದಾರೆ. ರಶ್ಮಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.

ಫಿನಾಲೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್​ ಪಟ್ಟ ಸಿಕ್ಕಿದೆ. ಕಳೆದ ವಾರ ನಡೆದ ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು.