Recent Posts

Friday, September 11, 2026
ಸುದ್ದಿ

ಮಾಜಿ ಸಚಿವ ರಮಾನಾಥ ರೈ ಹೇಳಿಕೆ ವಿರುದ್ದ ಹರಿಕೃಷ್ಣ ಬಂಟ್ವಾಳ್ ವಾಗ್ದಾಳಿ – ಕಹಳೆ ನ್ಯೂಸ್

ಮಂಗಳೂರು: ರಮಾನಾಥ ರೈ ಸಮಯ ಸಿಕ್ಕಾಗಲೆಲ್ಲಾ ಕಮಲ ನಾಯಕರ ವಿರುದ್ದ ಕಿಡಿಕಾರುತ್ತಿದ್ದು ಇತ್ತೀಚಿಗಷ್ಟೇ ನಳಿನ್ ಕುಮಾರ್ ಕಟೀಲ್ ವಿರುದ್ದ ವಿವಾದಿತ ಹೇಳಿಕೆ ನೀಡಿದ್ದು ಕರಾವಳಿ ರಾಜಕೀಯದಲ್ಲಿ ಚರ್ಚೆಗೆ ಗ್ರಾಸ್ತವಾಗಿದೆ.

ಜಾಹೀರಾತು

ಸಂಸದ ನಳಿನ್ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ಸಂಸದರು ಇದ್ದೂ ಸತ್ತ ಹಾಗೆ, ಅವರ ಶವಸಂಸ್ಕಾರ ಮಾಡಲು ಮಾತ್ರ ಬಾಕಿ ಇದೆ ಎಂದಿದ್ದರು. ಈ ಹೇಳಿಕೆಯು ಬಿಜೆಪಿ ನಾಯಕರನ್ನು ಕೆರಳಿಸಿದ್ದು ಮಾತ್ರವಲ್ಲದೆ ವಾಗ್ದಾಳಿಯನ್ನು ಕೂಡ ನಡೆಸುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೈಗಳ ಈ ಹೇಳಿಕೆಯನ್ನು ಖಂಡಿಸಿ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ರೈ ಅವರು ಜಿಹಾದಿ ಸಂಸ್ಕೃತಿ ಹೊಂದಿದವರಾಗಿದ್ದಾರೆ. ಅವರಿಗೆ ಟಿಪ್ಪು ರೋಲ್ ಮಾಡೆಲ್ ಆಗಿದ್ದಾರೆ. ಆದ್ದರಿಂದ ಅವರ ಬಾಯಲ್ಲಿ ಶವಸಂಸ್ಕಾರ ನೋಡುವಂತಹ ಹೇಳಿಕೆಗಳು ಬರುತ್ತಿದೆ.

ಅದ್ರಲ್ಲೂ ಅಧಿಕಾರವಿಲ್ಲದ ರಮಾನಾಥ ರೈ ಅವರು ಕಾಂಗ್ರೆಸ್‌ನಲ್ಲಿ ಸದ್ಯ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ ಎಂದು ಲೇವಣಿ ಮಾಡಿದ್ದಾರೆ. ಅಲ್ಲದೇ ವಿಜಯಾ ಬ್ಯಾಂಕ್ ವಿಲೀನ ವಿರೋದಿಸುವ ಕಾಂಗ್ರೆಸ್ಸಿಗರು ಮೊದಲು ವಾಸ್ತವ ಅರಿತುಕೊಳ್ಳಲಿ, ವಿಜಯಾ ಬ್ಯಾಂಕ್ ವಿಲೀನಕ್ಕೆ ಸಹಿ ಹಾಕಿದ್ದೇ ಮನಮೋಹನ್ ಸಿಂಗ್. ತಾಕತ್ತಿದ್ರೆ ರೈ ಅವರು ಮನಮೋಹನ್ ಸಿಂಗ್ ಅವರಲ್ಲಿ ಹೋಗಿ ಟೇಬಲ್ ಬಡಿಯಲಿ ಎಂದು ಖಡಕ್‌ ಆಗಿ ವಾಕ್‌ಸಮರವನ್ನು ನಡೆಸಿದರು.