BREAKING NEWS : ಅನಂತ್ ಕುಮಾರ್ ಅಕಾಲಿಕ ಮರಣದಿಂದ ತೆರವಾದ ಮಂತ್ರಿ ಸ್ಥಾನ ಯಾರಿಗೆ ಗೊತ್ತೇ? – ಕಹಳೆ ನ್ಯೂಸ್

ಬೆಂಗಳೂರು (ನ. 13): ನಿನ್ನೆ ಮುಂಜಾನೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಡಿ.ವಿ. ಸದಾನಂದ ಗೌಡರಿಗೆ ವಹಿಸಲಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸಾಂಖ್ಯಿಕ ಮತ್ತು ಯೋಜನೆಗಳ ಜಾರಿ ಸಚಿವರಾಗಿ ಅಧಿಕಾರದಲ್ಲಿರುವ ಡಿ.ವಿ. ಸದಾನಂದ ಗೌಡರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಈ ಮೂಲಕ ಕರ್ನಾಟಕದವರೇ ಆದ ಡಿ.ವಿ. ಸದಾನಂದ ಗೌಡರಿಗೆ ಅನಂತ್ ಕುಮಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಂತ್ರಿ ಸ್ಥಾನ ಲಭಿಸಿದೆ..

ಸಂಸದೀಯ ವ್ಯವಹಾರಗಳ ಖಾತೆಯನ್ನೂ ದಿ. ಅನಂತ್ ಕುಮಾರ್ ನಿರ್ವಹಿಸುತ್ತಿದ್ದರು. ಈ ಖಾತೆಯನ್ನು ಈಗ ಕೇಂದ್ರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಂಚಿಕೆ ಮಾಡಿದ್ದಾರೆ. ಖಾತೆ ಬದಲಾವಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಅಂಕಿತ ಸಿಕ್ಕಿದೆ.









