Recent Posts

Saturday, April 25, 2026
ಸುದ್ದಿ

ವಿಜಯದಶಮಿಯಂದು ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಕರೆ ನೀಡಿದ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್

ದಸರೆಯ ರಾಮಲೀಲಾ ಉತ್ಸವಾಚರಣೆಗೆ ಸಿದ್ಧರಾಗುವಂತೆ ರಾಮಮಂದಿರ ನಿರ್ಮಾಣಕ್ಕೆ ಸಿದ್ಧರಾಗುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ರಾಮಜನ್ಮಭೂಮಿ ವಿವಾದ ಕುರಿತಂತೆ ಸುಪ್ರೀಂಕೋರ್ಟಿನ ಅಂತಿಮ ತೀರ್ಪು ಇನ್ನು ಹೊರಬರಬೇಕಿದೆ. ಆದರೆ, ಮಂದಿರ ನಿರ್ಮಾಣಕ್ಕೆ ಸಿದ್ಧರಾಗುವಂತೆ ಮುಖ್ಯಮಂತ್ರಿ ನಿನ್ನೆಯ ವಿಜಯದಶಮಿ ಭಾಷಣದಲ್ಲಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗತ್ ಅವರೂ ಮಂದಿರ ನಿರ್ಮಾಣಕ್ಕೆ ಪೂರಕ ಕಾನೂನು ಹಾದಿ ಕಂಡುಕೊಳ್ಳುವಂತೆ ನಿನ್ನೆ ಸರ್ಕಾರಕ್ಕೆ ಸೂಚಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ರಾಮಜನ್ಮ ಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟಿನ ಅಂತಿಮ ತೀರ್ಪು ಬಾಕಿ ಇದೆಯಾದರೂ ಈವರಗಿನ ಕೆಳ ನ್ಯಾಯಾಲಯಗಳ ತೀರ್ಪುಗಳು ರಾಮಮಂದಿರ ನಿರ್ಮಾಣದ ಪರವಾಗಿಯೇ ಇವೆ. ಬಾಬರಿ ಮಸೀದಿ ಕೆಳಗ ದೇವಸ್ಥಾನದ ಅವಶೇಷಗಳು ಇರುವುದನ್ನು ಭಾರತೀಯ ಪ್ರಾಚ್ಚ ಸರ್ವೇಷಣಾಲಯವೂ ತನ್ನ ವರದಿಯಲ್ಲಿ ಹೇಳಿದೆ.ಇದೇ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಬಗ್ಗೆ ಸರ್ಕಾರವನ್ನು ಟೀಕಿಸಿರುವ ಶಿವಸೇನೆ, ಮುಖ್ಯಸ್ಥ ಉದ್ಧವ್ ಠಾಕ್ರೆ, ಇದು ಇಚ್ಛಾಶಕ್ತಿ ಕೊರತೆಯನ್ನು ಸೂಚಿಸುತ್ತದೆ’ ಎಂದೂ ಹೇಳಿದ್ದಾರೆ.