ಉಪ್ಪಿನಂಗಡಿ : ಕೂಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಮೃತ್ಯು ಪ್ರಕರಣ : ಮೆಸ್ಕಾಂ ಹಾಗೂ ಮನೆಯ ಯಜಮಾನನ ಮೇಲೆ ಎಫ್ ಐ ಆರ್ ದಾಖಲು – ಕಹಳೆ ನ್ಯೂಸ್

ಉಪ್ಪಿನಂಗಡಿ : ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದಮಲೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನಂತೆ ಮೆಸ್ಕಾಂ ಇಲಾಖೆ ಹಾಗೂ ಜಾಗದ ಯಜಮಾನನ ಮೇಲೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಳಂತಿಲ ಗ್ರಾಮದ ಪದಮಲೆ ಬಳಿ ನಿವಾಸಿ ಸಗುಣ (58) ಮೃತಪಟ್ಟವರು. ಸಗುಣರವರು ಮನೆ ಸಮೀಪದ ಜಯಂತ ಕುಮಾರ್ ಎಂಬವರ ಮನೆಯ ಕೆಲಸಕ್ಕೆ ತೆರಳಿದ್ದರು. ಗುಡದಲ್ಲಿ ಪೆÇದೆಗಳ ನಡುವೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು ಇದರ ಅರಿವಿಲ್ಲದ ಸಗುಣರವರು ಅದನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಅವರಿಗೆ ಶಾಕ್ ಹೊಡೆದು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಲ್ಲಿದ್ದವರು ಅವರನ್ನು ಆರೈಕೆ ಮಾಡಿ ಬಳಿಕ ವುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದಾರೆ. ಪರಿಕ್ಷೀಸಿದ ವೈದ್ಯರು ಸಗುಣರವರು ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ
ಮೆಸ್ಕಾಂ ಇಲಾಖೆಯವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯ ಕುರಿತಾಗಿ ಯಾವುದೇ ಗಮನ ಹರಿಸದೆ ನಿರ್ಲಕ್ಷ ವಹಿಸಿರುವ ಬಗ್ಗೆ, ಹಾಗೂ ಅಂಗಾರು ಮತ್ತು ಅವರ ಪತಿ ಸಗುಣರವರನ್ನು ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯಿರುವ ಸ್ಥಳದಲ್ಲಿ ಕೆಲಸಕ್ಕೆ ನೇಮಿಸಿ ಕೆಲಸ ಮಾಡಿಸಿರುವ ಬಗ್ಗೆ ಜಯಂತ ಕುಮಾರ್‍ರವರ ವಿರುದ್ಧ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅ.ಕ್ರ 148/2023ರಂತೆ ಕಲಂ 304(ಎ) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.















