Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ವಿವಿಧ ಮನೆ ನಿರ್ಮಾಣಕ್ಕೆ ಸಾಮಾಗ್ರಿ ವಿತರಣೆ ಮಾಡಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ-ಕಹಳೆ ನ್ಯೂಸ್

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಹಲವು ಬಡವರ ಮನೆ ನಿರ್ಮಾಣಕ್ಕೆ ಸಾಮಾಗ್ರಿ ನೀಡಿದರು. ಆರ್ಯಾಪು ಗ್ರಾಮದ ಸಂಟ್ಯಾರು ನಿವಾಸಿ ಅಬ್ದುಲ್ ಅಝಿಝ್ ರವರ ಮನೆ ನಿರ್ಮಾಣಕ್ಕೆ ಸಿಮೆಂಟ್, ಇರ್ದೆ ಜೋಗಿಮೂಲೆ ನಿವಾಸಿ ಪ್ರಭಾವತಿಯವರ ಮನೆ ಛಾವಣಿಗೆ ಸಿಮೆಂಟ್ ಶೀಟ್, ಬನ್ನೂರು ನವಾಸಿ ಮಾಲತಿಯವರ ಮನೆ ಛಾವಣಿಗೆ ಸಿಮೆಂಟ್ ಶೀಟ್, ನರಿಮೊಗರು ಬೀಟಿಕಾಡು ನಿವಾಸಿ ಜಯರವರ ಮನೆ ನಿರ್ಮಾಣಕ್ಕೆ...
ಹೆಚ್ಚಿನ ಸುದ್ದಿ

ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಉದ್ಘಾಟನೆಯಲ್ಲಿ ಭಾಗಿಯಾದ ಶಾಸಕ ಹರೀಶ್ ಪೂಂಜಾ-ಕಹಳೆ ನ್ಯೂಸ್

ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಎಫ್‍ಎಫ್124 ಕೇಂದ್ರ ಕಛೇರಿ, ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಆರಂಬೋಡಿಯಲ್ಲಿ ನಿರ್ಮಾಣಗೊಂಡ ನೂತನ ಶಾಖೆಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು....
ಹೆಚ್ಚಿನ ಸುದ್ದಿ

ಹಿಂದು ಜಾಗರಣ ವೇದಿಕೆ ಪುತ್ತೂರು ವತಿಯಿಂದ ಮಾರ್ಚ್ 21ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ದ ಗದ್ದೆಯಲ್ಲಿ ನಡೆಸಲು ಉದ್ದೇಶಿಸಿರುವ ಹಿಂದು ಐಕ್ಯತಾ ಸಮಾವೇಶದ ಲೋಗೋ ಬಿಡುಗಡೆ-ಕಹಳೆ ನ್ಯೂಸ್

ಹಿಂದು ಜಾಗರಣ ವೇದಿಕೆ ಪುತ್ತೂರು ವತಿಯಿಂದ ಮಾರ್ಚ್ 21ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ದ ಗದ್ದೆಯಲ್ಲಿ ನಡೆಸಲು ಉದ್ದೇಶಿಸಿರುವ ಹಿಂದು ಐಕ್ಯತಾ ಸಮಾವೇಶದ ಲೋಗೋ ಬಿಡುಗಡೆಯನ್ನು ಧರ್ಮಸ್ಥಳ ದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ,ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ,ಪುತ್ತೂರು ತಾಲ್ಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜ ನಗರ,ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ,ಪ್ರಚಾರ ಪ್ರಮುಖ್ ಮನೋಜ್...
ಹೆಚ್ಚಿನ ಸುದ್ದಿ

ಪ್ರಧಾನಿ ಮೋದಿಯವರ ವೇತನದ ಬಗ್ಗೆ ಮಾಹಿತಿ ಇಲ್ಲಿದೆ-ಕಹಳೆ ನ್ಯೂಸ್

ದೆಹಲಿ: ಎಲ್ಲರಲ್ಲೂ ಹೆಚ್ಚು ಕುತೂಹಲ ಮೂಡಿಸುವ ಪ್ರಶ್ನೆಗಳಲ್ಲಿ ಒಂದು ದೇಶದ ಪ್ರಮುಖ ವ್ಯಕ್ತಿಗಳ ವೇತನ ಎಷ್ಟು ಇರಬಹುದೆಂದು. ಪ್ರಧಾನಿ ಮೋದಿಯವರ ಬಗ್ಗೆ ನೋಡುವುದಾದರೆ ಅವರು ಎಷ್ಟು ಸಂಬಳ ತೆಗೆದುಕೊಳ್ಳುತ್ತಾರೆ, ಅವರ ಸಂಬಳಯೆಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದಲ್ಲಿ ಸಂವಿಧಾನ ಮತ್ತು ಕಾನೂನಿನ ಅಡಿಯಲ್ಲಿ ಪ್ರಧಾನಮಂತ್ರಿಗಳಿಗೆ ಸಂಬಳ ನೀಡಲಾಗುತ್ತದೆ. ಅದ್ದರಿಂದ ಪ್ರಧಾನಿ ಮೋದಿಯವರು ಪ್ರತಿ ತಿಂಗಳು 50,000 ಸಂಬಳ ಪಡೆಯುತ್ತಿದ್ದು, ಅದರೊಂದಿಗೆ ಸಂಪರ್ಕ ಭತ್ಯೆ , ದೈನಂದಿನ ಭತ್ಯೆ, ಕ್ಷೇತ್ರ...
ಹೆಚ್ಚಿನ ಸುದ್ದಿ

ಮಗಳ ಮದುವೆ ದಿನ ಎನಿಸುತ್ತಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವು-ಕಹಳೆ ನ್ಯೂಸ್

ಹೈದರಾಬಾದ್: ತೆಲಂಗಾಣದ ಜಗಿತ್ತಲಾ ಜಿಲ್ಲೆಯ ಮೇದಪಲ್ಲಿಯ ಎಸ್‌ಆರ್‌ಎಸ್‌ಸಿ ಕಾಕತೀಯ ಕಾಲುವೆಯಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಲಾಯರ್ ಅಮರೇಂದ್ರ ಕುಟುಂಬ ಜಗಿತ್ತಲ ಬಿಟ್ಟು ಸೊಂಟೂರು ಜೊಗಿನಿಪಲ್ಲಿಗೆ ಹಬ್ಬಕ್ಕೆಂದು ತೆರಳಿದ್ದರು. ಮೇದಪಲ್ಲಿ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಕಾಲುವೆಗೆ ಬಿದ್ದಿದೆ. ಕಾರು ಓಡಿಸುತ್ತಿದ್ದ ಜಯಂತ್ ಬಾಗಿಲು ತೆರೆದು ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ಉಳಿದ ಮೂವರು ಕಾರಿನಲ್ಲಿ...
ಹೆಚ್ಚಿನ ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪರಮೇಶ್ವರಿ ಆಯ್ಕೆ-ಕಹಳೆ ನ್ಯೂಸ್

ಬಂದಾರು: ಬಂದಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೂತನ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯ ಫಲಿತಾಂಶ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಪರಮೇಶ್ವರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಾಧರ ಆಯ್ಕೆಯಾಗಿದ್ದರೆ. ಗ್ರಾಮ ಪಂಚಾಯತ್ ಬಂದಾರು ಚುನಾವಣೆಯಲ್ಲಿ ಒಟ್ಟು 16 ಸ್ಥಾನಗಳಿದ್ದು, 16  ಸ್ಥಾನದಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಲು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾನಿ ಹಿಡಿದಿದ್ದಾರೆ. ಬಂದಾರು ೨ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಪರಮೇಶ್ವರಿಯವರು ಸಾಮಾನ್ಯ ಮಹಿಳೆ ಮೀಸಲಾತಿಗೆ ನಾಮಪತ್ರ ಸಲ್ಲಿಸಿ...
ಹೆಚ್ಚಿನ ಸುದ್ದಿ

ಜಲಗಾಂವ್ ಜಿಲ್ಲೆಯ ಕಿಂಗ್‌ಗಾ0ವ್‌ನಲ್ಲಿ ಚಾಲಕನ ದಿಢೀರ್ ತಿರುವಿನ ಪರಿಣಾಮ ಲಾರಿ ಉರುಳಿ 15 ಮಂದಿ ಸಾವು-ಕಹಳೆ ನ್ಯೂಸ್

ಜಲಗಾಂವ್: ಮಧ್ಯರಾತ್ರಿ ಚಾಲಕ ತೆಗೆದುಕೊಂಡ ದಿಢೀರ್ ತಿರುವಿನಿಂದ ಲಾರಿ ಉರುಳಿ 15 ಮಂದಿ ಸಾವನ್ನಪ್ಪಿದ್ದ ಘಟನೆ ಜಲಗಾಂವ್ ಜಿಲ್ಲೆಯ ಕಿಂಗ್‌ಗಾ0ವ್ ಗ್ರಾಮದ ದೇವಸ್ಥಾನದ ಬಳಿ ನಡೆದಿದೆ. ಪರಂಗಿ ತುಂಬಿದ್ದ ಟ್ರಕ್‌ನಲ್ಲಿ ಅಭೋದ, ಕೆರ್ಹಾಲ ಮತ್ತು ರಾವೆರ್ ಎಂಬ ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಐವರು ಗಂಭೀರ ಗಾಯಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಟ್ರಕ್‌ನಲ್ಲಿದ್ದ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದರು ಎಂದು ಮಾಹಿತಿ ಮೂಲಗಳು ತಿಳಿಸಿದ್ದು, ಪೊಲೀಸರು...
ಹೆಚ್ಚಿನ ಸುದ್ದಿ

ಜಾಮೀನು ರಹಿತ ಕೇಸ್ ದಾಖಲಿಸಿ ಬಂಧಿಸಿದ ಇಬ್ಬರನ್ನು ಬಿಡುಗಡೆಗೊಳಿಸಬೇಕೆಂದು ಅರಣ್ಯಾಧಿಕಾರಿಗಳ ವಿರುದ್ಧ ಅಮಾಸೆಬೈಲು ಗ್ರಾಮಸ್ಥರ ಆಕ್ರೋಶ-ಕಹಳೆ ನ್ಯೂಸ್

ಸಿದ್ದಾಪುರ: ವನ್ಯಜೀವಿ ವಲಯ ವಿಭಾಗದ ಅಧಿಕಾರಗಳು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೊಮವಾರ ನಡೆದಿದೆ. ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ಎಂಬವರ ಮಗ ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರು ಎರ್ ಗನ್ ಹಿಡಿದುಕೊಂಡು ರಾತ್ರಿ ಬೈಕ್ ನಲ್ಲಿ ಬಂದಿದ್ದಾರೆ ಎಂದು ತಂಡದೊ0ದಿಗೆ ಬಂದ ವನ್ಯಜೀವಿ ವಲಯ ಸಂರಕ್ಷಾಣಾ ಅಧಿಕಾರಿಯವರು ಎರ್ ಗನ್ ಮತ್ತು ಬೈಕ್ ನ್ನು ವಶಕ್ಕೆ ಪಡೆದು,...
1 96 97 98 99 100 174
Page 98 of 174