ಕಾರ್ಕಳ ತಾಲೂಕಿನಲ್ಲಿ ಜಾನುವಾರು ಕಳವು ಮಾಡಿ ,ಮಾಂಸಕ್ಕಾಗಿ ವಧೆಗೆ ಯತ್ನ ; ಓರ್ವ ವಶಕ್ಕೆ, ಮತ್ತೋರ್ವ ಪರಾರಿ-ಕಹಳೆ ನ್ಯೂಸ್
ಕಾರ್ಕಳ : ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಕಾಪು ಹೌಸ್ ಎಂಬಲ್ಲಿ ಶನಿವಾರ ಬೆಳಿಗ್ಗೆ 05:30 ಗಂಟೆಗೆ ಜಾನುವಾರು ಕಳ್ಳತನ ಮಾಡಿ, ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು, ಜನಾರ್ಧನ್ ಕೆ ಅವರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನನ್ನು ರೆಂಜಾಳದ ಅಬ್ದುಲ್ ಖಾದರ್...







