Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕುಂಡಡ್ಕ ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ; ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು-ಕಹಳೆ ನ್ಯೂಸ್

ವಿಟ್ಲ : ಕುಂಡಡ್ಕ ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ ಆಗುವುದನ್ನು ಬಜರಂಗದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲೇ ಹಸುವು ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿದೆ. ಹಸು ಮತ್ತು ಕರುವಿನ ರಕ್ಷಣೆಯನ್ನು ಕುಂಡಡ್ಕ ಅಬೀರಿ ಶಾಖೆಯ ವಿಹಿಂಪ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಮಾಡಲಾಯಿತು....
ಹೆಚ್ಚಿನ ಸುದ್ದಿ

ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬೇಕರಿ ಮತ್ತು ಪೈಪ್ ಅಂಗಡಿಗಳು-ಕಹಳೆ ನ್ಯೂಸ್

ವಿಜಯಪುರ : ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೆಳ್ಳಂ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ, ಎರಡು ಅಂಗಡಿಗಳು ಬೆಂಕಿಗೆ ಸುಟ್ಟು ಹೋಗಿರುವ ಘಟನೆ ನಡೆದಿದೆ. ಇಲ್ಲಿನ ಬೇಕರಿ ಮತ್ತು ಪೈಪ್ ಅಂಗಡಿಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ಸಿಬ್ಬಂದಿ, ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿದ್ದು, ಈ ಘಟನೆ ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಹೆಚ್ಚಿನ ಸುದ್ದಿ

ಈದು ಶ್ರೀ ವನದುರ್ಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ರಾವ್, ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಎನ್ ಇ ಆಯ್ಕೆ-ಕಹಳೆ ನ್ಯೂಸ್

ಶ್ರೀ ವನದುರ್ಗ ದೇವಸ್ಥಾನ ಈದು ಕೇರ ಪಿಜತ್ತಕಟ್ಟೆ ಇದರ ಸಮಿತಿಯ ಸಭೆಯು ಇತ್ತೀಚೆಗೆ ದೇವಸ್ಥಾನ ವಠಾರದಲ್ಲಿ ಜರಗಿತು. ಈ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಪುರುಷೋತ್ತಮ ರಾವ್, ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಎನ್ ಇ, ಕೋಶಾಧಿಕಾರಿಯಾಗಿ ಅನಂತ ಭಟ್, ಕಾರ್ಯದರ್ಶಿಯಾಗಿ ಗಂಗಾಧರ ಗೌಡ, ಉಪಾಧ್ಯಕ್ಷರಾಗಿ ಸದಾನಂದ ಕೇರ, ರಮೇಶ್ ಪಾಲಡ್ಕ, ಜತೆ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಮದ್ರೊಟ್ಟು ಆಯ್ಕೆಯಾದರು. ಈ ಸಭೆಯಲ್ಲಿ...
ಹೆಚ್ಚಿನ ಸುದ್ದಿ

ಕೊಳಂಬಳ ಎಂಬಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಾಗ ನಂದಿಸುವ ಕೆಲಸದಲ್ಲಿ ಸಹಕರಿಸಿದ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ-ಕಹಳೆ ನ್ಯೂಸ್

ಕೊಳಂಬಳ ಎಂಬಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ ಇವರು ಬೆಂಕಿ ನಂದಿಸುವ ಕೆಲಸದಲ್ಲಿ ಸಹಕರಿಸಿದರು. ಇವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ದೊಡ್ಡಮಟ್ಟದಲ್ಲಿ ಬೆಂಕಿ ಹರಡುವುದನ್ನು ಸಕಾಲಿಕ ಪ್ರಯತ್ನದಿಂದ ಅಪಾಯವನ್ನು ತಪ್ಪಿಸಿದರು....
ಹೆಚ್ಚಿನ ಸುದ್ದಿ

ವಿದ್ಯುತ್ ಲೈನಿಗೆ ಮರಗಳ ಗೆಲ್ಲು ತಾಗಿ ಅಪಾಯ ಸಂಭವಿಸುವುದನ್ನು ಅರಿತು ದುರಸ್ತಿಗೊಳಿಸಿದ ನಮ್ಮ ಯುವಕ ಮಂಡಲದ ಭಾಸ್ಕರ್ ನೆಟ್ಟಾರು-ಕಹಳೆ ನ್ಯೂಸ್

ನವಗ್ರಾಮ ರಸ್ತೆಯ ಬೀದಿ ದೀಪದ ರಿಪೇರಿ ಸಂದರ್ಭದಲ್ಲಿ ವಿದ್ಯುತ್ ಲೈನಿಗೆ ಮರಗಳ ಗೆಲ್ಲು ತಾಗಿ ಅಪಾಯ ಸಂಭವಿಸುವುದನ್ನು ಅರಿತ ನಮ್ಮ ಯುವಕ ಮಂಡಲದ ಭಾಸ್ಕರ್ ನೆಟ್ಟಾರು ಇವರು ಊರಿನ ಜನರ ಸಹಾಯದಿಂದ ಮರದ ಕೊಂಬೆ ಕಡಿದು ದುರಸ್ತಿಗೊಳಿಸಿದರು....
ಹೆಚ್ಚಿನ ಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ –ಕಹಳೆ ನ್ಯೂಸ್

ಕಲ್ಲಡ್ಕ : ಏಪ್ರಿಲ್ 1 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಆರೋಗ್ಯ ಮಾಹಿತಿ ಕಾರ್ಯಕ್ರಮ” ನಡೆಯಿತು. ವಿಟ್ಲ, ಸಮುದಾಯ ಆರೋಗ್ಯ ಕೇಂದ್ರದ ಆರ್.ಕೆ.ಎಸ್.ಕೆ ಕೌನ್ಸಿಲರ್ ಆಗಿರುವ ಶ್ರುತಿ ಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಪೌಢಾವಸ್ಥೆಗೆ ಬಂದಾಗ ದೇಹದಲ್ಲಿ ಉಂಟಾಗುವ ಬದಲಾವಣೆ, ದೈಹಿಕ ಹಾಗೂ ಮಾನಸಿಕ ಸ್ವಚ್ಛತೆ, ಅಪರಿಚಿತರೊಂದಿಗೆ ತಮ್ಮ ವರ್ತನೆ, ಮಾನಸಿಕ ನಿಯಂತ್ರಣದೊಂದಿಗೆ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ತಿಳಿಸಿದರು. ಬಾಳ್ತಿಲ ಆರೋಗ್ಯ ಕೇಂದ್ರದ ವೀರೇಶ್ ಮಾತನಾಡುತ್ತಾ,...
ಹೆಚ್ಚಿನ ಸುದ್ದಿ

ಗೋಕಾಕ ತಾಲೂಕಿನಲ್ಲಿ ರಸ್ತೆ ಅಪಘಾತ; ಸ್ಥಳದಲ್ಲೇ 2 ವರ್ಷದ ಮಗು ಮೃತ್ಯು-ಕಹಳೆ ನ್ಯೂಸ್

ಕೊಣ್ಣೂರು : ಇಂದು ಬೆಳಗ್ಗೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸ್ಥಳದಲ್ಲೇ 2 ವರ್ಷದ ಮಗು ಮೃತಪಟ್ಟಿದೆ. ಮೃತ ಮಗುವನ್ನು ಸಿದ್ದಾರ್ಥ ಮಲ್ಲನವರ ಎಂದು ತಿಳಿದುಬಂದಿದ್ದು, ವಾಹನದ ಚಾಲಕನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಗೋಕಾಕ ಗ್ರಾಮೀಣ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ....
ಹೆಚ್ಚಿನ ಸುದ್ದಿ

ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ ; ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಆಯೋಗ-ಕಹಳೆ ನ್ಯೂಸ್

ನವದೆಹಲಿ : ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳು, ಅಸ್ಸಾಂನಲ್ಲಿ ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಆಯೋಗವು ಅಮಾನತುಗೊಳಿಸಿದೆ. ಈ ಕುರಿತು ಅಸ್ಸಾಂ ಮೂಲದ ಪತ್ರಕರ್ತ ಅತಾನು ಭುಯಾನ್ ಇವಿಎಂಗಳಿರುವ ಕಾರಿನ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ಘಟನೆಯ ಬಳಿಕ ಪಥರ್‍ಕಾಂಡಿ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ಇವಿಎಂಗಳಿದ್ದ ಬೊಲೆರೊ ಕಾರು...
1 67 68 69 70 71 174
Page 69 of 174