ಬಿಳ್ಳೂರುನಲ್ಲಿ ಉಚಿತ ಡಿಜಿಟಲ್ ಸೇವಾ ಕೇಂದ್ರ ಆರಂಭ ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯವರಿಂದ ಲೋಕಾರ್ಪಣೆ –ಕಹಳೆ ನ್ಯೂಸ್
ಬಾಗೇಪಲ್ಲಿ : 'ಆಧಾರ್, ಪಡಿತರ ಚೀಟಿಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ಆನ್ಲೈನ್ ಆಗಿರುವುದರಿಂದ, ಜನರಿಗೆ ಅನುಕೂಲ ಕಲ್ಪಿಸಲು ತಮ್ಮ ಟ್ರಸ್ಟ್ನಿಂದ ಬಿಳ್ಳೂರು ಗ್ರಾಮದಲ್ಲಿ ಉಚಿತವಾಗಿ ಡಿಜಿಟಲ್ ಸೇವಾಕೇಂದ್ರ ಆರಂಭಿಸಲಾಗಿದೆ' ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು. ಅವರು ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ' ಡಿಜಿಟಲ್ ಸೇವಾಕೇಂದ್ರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪಡೆಯಲು, ವಿದ್ಯಾರ್ಥಿ ವೇತನ, ಪಹಣಿ, ಆಧಾರ್, ಪಡಿತರ...







