Friday, March 13, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ! – ಕಹಳೆ ನ್ಯೂಸ್

ನವದೆಹಲಿ: ದೇಶದ ಎಲ್ಲಾ ರೇಲ್ವೆ ನಿಲ್ದಾಣದಲ್ಲಿ ಚಹಾ ಕುಡಿಯಲು ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಕಪ್ (ಕುಲ್ಹಾಡ್ಸ್)ಗಳನ್ನು ಮಾತ್ರ ಬಳಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗವಾರ ರೇಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶದ ಸುಮಾರು 400 ರೇಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿಯೂ ಇದೇ...
ಹೆಚ್ಚಿನ ಸುದ್ದಿ

ಇಂದು ಸಂಭವಿಸಲಿದೆ ವರ್ಷದ ಕೊನೆಯ ಮತ್ತು 4ನೇ ಚಂದ್ರಗ್ರಹಣ; ಎಲ್ಲೆಲ್ಲಿ ಗ್ರಹಣ ಗೋಚರ? – ಕಹಳೆ ನ್ಯೂಸ್

ನವದೆಹಲಿ : ಇಂದು ಖಗೋಳ ಲೋಕದಲ್ಲಿ ಮಹತ್ವದ ದಿನವಾಗಿದೆ. ಯಾಕೆಂದರೆ ಈ ವರ್ಷದ ನಾಲ್ಕನೇ ಹಾಗೂ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ಚಂದ್ರಗ್ರಹಣವು 2020ನೇ ವರ್ಷದ 4ನೇ ಚಂದ್ರಗ್ರಹಣವಾಗಿದೆ. ಈವರೆಗೆ ಈ ವರ್ಷದಲ್ಲಿ ಒಟ್ಟು ಮೂರು ಚಂದ್ರಗ್ರಹಣಗಳು ಸಂಭವಿಸಿವೆ. ವಿಶೇಷ ಎಂದರೆ ಈ ವರ್ಷದ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮ ದಿನವಾದ ಇಂದು ಸಂಭವಿಸಲಿದ್ದು, ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಅಂದರೆ ಭೂಮಿಯು ಸೂರ್ಯ ಹಾಗೂ...
ಹೆಚ್ಚಿನ ಸುದ್ದಿ

ಶವಾಗಾರದಲ್ಲಿ ಹೆಣ ಇಡುವಾಗಲೇ ಎದ್ದುಕುಳಿತ ಯುವಕ! ಕಿರುಚಿಕೊಂಡ ವೈದ್ಯರು -ಕಹಳೆ ನ್ಯೂಸ್

ಕೆಲವೊಮ್ಮೆ ಯಾರ ಊಹೆಗೂ ನಿಲುಕದ್ದ ಸಂಗತಿಗಳು ನಡೆದುಬಿಡುತ್ತವೆ. ಅಂಥದ್ದೇ ಒಂದು ವಿಚಿತ್ರ ಹಾಗೂ ಅಷ್ಟೇ ಕುತೂಹಲ ಎನ್ನುವ ಘಟನೆ ನೈರೋಬಿಯಲ್ಲಿ ನಡೆದಿದ್ದು, ವೈದ್ಯರ ತಂಡವನ್ನೇ ಬೆಚ್ಚಿಬೀಳಿಸಿದೆ. ಸತ್ತಿದ್ದವ ಬದುಕಿ ಬಂದು ವೈದ್ಯರನ್ನೇ ಕಿರುಚುವಂತೆ ಮಾಡಿದ ಘಟನೆ ಇದು. ಪೀಟರ್​ ಕೀಗೆನ್​ ಎಂಬ 32 ವರ್ಷದ ಯುವಕನೇ ಈ ರೀತಿ ವೈದ್ಯರಿಗೆ ಗಾಬರಿಹುಟ್ಟಿಸಿದವ. ಅಷ್ಟಕ್ಕೂ ಆಗಿದ್ದೇನೆಂದರೆ ಪೀಟರ್ ತೀವ್ರವಾಗಿ ಹೊಟ್ಟೆ ನೋವಿನಿಂದ ನರಳುತ್ತಿದ್ದ. ನಿನ್ನೆ ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದುಬಿಟ್ಟಿದ್ದಾನೆ. ಕೂಡಲೇ...
ಹೆಚ್ಚಿನ ಸುದ್ದಿ

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ? -ಕಹಳೆ ನ್ಯೂಸ್

ನವದೆಹಲಿ: ದ್ವಿಚಕ್ರ ವಾಹನ ಸವಾರರ ಪ್ರಾಣರಕ್ಷಣೆಯ ಹಿನ್ನೆಲೆಯಲ್ಲಿ ಹೆಲ್ಮೆಟ್​ ಕಡ್ಡಾಯ ಮಾಡಿರುವುದು ತೀರಾ ಹಳೆಯ ಸಂಗತಿ. ಅದಾದ ಮೇಲೆ ಹಿಂಬದಿ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟುತ್ತಿರುವುದನ್ನು ಕಂಡ ಸರ್ಕಾರ, ಹಿಂಬದಿ ಸವಾರರಿಗೂ ಹೆಲ್ಮೆಟ್​ ಕಡ್ಡಾಯ ಮಾಡಿದೆ. ಹೆಲ್ಮೆಟ್​ ಇಲ್ಲದ ದಿನಗಳಿಗೆ ಹೋಲಿಸಿದರೆ, ಹೆಲ್ಮೆಟ್​ ಕಡ್ಡಾಯ ಮಾಡಿದ ಮೇಲೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಇಳಿಮುಖವಾಗಿದ್ದರೂ, ಈಗ ಹೆಚ್ಚಿನವರು ದಂಡವನ್ನು ತಪ್ಪಿಸಿಕೊಳ್ಳಲು ನಾಮ್​ಕೇವಾಸ್ತೆ ಹೆಲ್ಮೆಟ್​ ಹಾಕಿಕೊಳ್ಳುತ್ತಿದ್ದಾರೆ. ಯಾವುದೇ ಸುರಕ್ಷತೆ ಇಲ್ಲದ ಹೆಲ್ಮೆಟ್​ಗಳನ್ನು ಕೇವಲ...
ಹೆಚ್ಚಿನ ಸುದ್ದಿ

ಡ್ರಗ್ಸ್ ಕೇಸ್ : ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟಿ ರಾಗಿಣಿ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿಗಾಗಿ ವಿಧ ವಿಧದಲ್ಲಿ ಪ್ರಯತ್ನ ನಡೆಸಿದ್ದರೂ ಇದುವರೆಗೂ ಯಶ ಕಂಡಿಲ್ಲ, ಇದೇ ಕಾರಣದಿಂದ ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಕಂಬಿಗಳ ಹಿಂದೆ ಸೆರೆಯಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ...
ಹೆಚ್ಚಿನ ಸುದ್ದಿ

`ಭಾರತದ ಸಂಸ್ಕೃತಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ’ : ಪ್ರಧಾನಿ ಮೋದಿ -ಕಹಳೆ ನ್ಯೂಸ್

ನವದೆಹಲಿ : ಅಜಂತಾ ಗುಹೆಗಳು ಸೇರಿದಂತೆ ಕೋವಿಡ್-19 ರ ನಡುವೆ ವಸ್ತು ಸಂಗ್ರಹಾಲಯಗಳು ಮತ್ತು ಇತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ ನ 71 ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆನಾಡದಿಂದ ಭಾರತಕ್ಕೆ ಅನ್ನಪೂರ್ಣ ದೇವಿ ಮೂರ್ತಿ ವಾಪಸ್ ತರಲಾಗಿದೆ. ವಾರಣಾಸಿಯಿಂದ ಕಾಣೆಯಾಗಿದ್ದ ಅನ್ನಪೂರ್ಣ ದೇವಿ ಭಾರತಕ್ಕೆ ವಾಪಸ್ ತರಲಾಗಿದೆ. ಇದು ಭಾರತತೀಯರಲ್ಲಿಗೂ ಶುಭ ಸುದ್ದಿ ಎಂದು...
ಹೆಚ್ಚಿನ ಸುದ್ದಿ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ : ಮೀನುಗಾರರು ಪ್ರಾಣಾಪಾಯದಿಂದ ಪಾರು – ಕಹಳೆ ನ್ಯೂಸ್

 ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮುಳುಗಿದೆ. ಅದೃಷ್ಟವಶಾತ್ ಅದರಲ್ಲಿದ್ದ ಏಳು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಮುದ್ರದಲ್ಲಿ ಮುಳುಗಿದ ದೋಣಿಯು ಮಲ್ಪೆಯದ್ದಾಗಿದ್ದು, ಮಥುರಾ ಹೆಸರಿನ ಈ ಆಳಸಮುದ್ರ ಮೀನುಗಾರಿಕಾ ದೋಣಿಯು ನ. 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು, ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿ ಬಲೆ, ಡೀಸೆಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗೋವಾ-ಮಹಾರಾಷ್ಟ್ರ ರಾಜ್ಯ...
ಹೆಚ್ಚಿನ ಸುದ್ದಿ

ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ – ಕಹಳೆ ನ್ಯೂಸ್

ಉಡುಪಿ: ಉಡುಪಿ ಜಿಲ್ಲೆಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರವಾಸಕ್ಕೂ ಮುನ್ನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದರು. ಶನಿವಾರ ರಾತ್ರಿ ಉಡುಪಿ ಜಿಲ್ಲೆಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಅನ್ನ ಪ್ರಸಾದ ಸೇವಿಸಿ ಬಳಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದರು....
1 140 141 142 143 144 174
Page 142 of 174