Tuesday, March 17, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ವಿಟ್ಲ ಬಸವನಗುಡಿಯಲ್ಲಿ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ನಾಗ ಮತ್ತು ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶ – ಕಹಳೆ ನ್ಯೂಸ್

ವಿಟ್ಲ : ವಿಟ್ಲ ಬಸವನಗುಡಿಯಲ್ಲಿ ಜೀರ್ಣೋದ್ಧಾರಗೊಳಿಸಿದ ಶ್ರೀ ನಾಗ, ರಕ್ತೇಶ್ವರಿ, ಗುಳಿಗ ಸಾನಿಧ್ಯದ ಪುನಃಪ್ರತಿಷ್ಠೆ ಬ್ರಹ್ಮಕಲಶವು ಕುಂಟುಕುಡೇಲು ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ದೈವಜ್ಞ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ, ವೇದಮೂರ್ತಿ ಭಾರ್ಗವ ಉಡುಪ, ಮುಳಿಯಾಲ ಪ್ರಸನ್, ಶಿವಪ್ರಭಾದೇವಿ ಕಾಡುಮಠ, ಕೃಷ್ಣಯ್ಯ ಕೆ, ಕೆ. ಸುಬ್ರಹ್ಮಣ್ಯ ಭಟ್ಟ, ಸತೀಶ್ ಕುಮಾರ್ ಆಳ್ವ, ಜಯರಾಮ ಭಟ್ಟ, ಅಶೋಕ, ಗಿರಿಯಪ್ಪ ಗೌಡ, ಶಾರದಾ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತವೃಂದದವರು...
ಹೆಚ್ಚಿನ ಸುದ್ದಿ

ಕೇಪು ಗ್ರಾಮದಲ್ಲಿ ಯುವಕನೊಬ್ಬ ಮಹಡಿಯಿಂದ ಬಿದ್ದು ಸಾವು- ಕಹಳೆ ನ್ಯೂಸ್

ವಿಟ್ಲ: ಯುವಕನೊಬ್ಬ ಸಂಬಂಧಿಕರ ಮನೆಯಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಕೇಪು ಗ್ರಾಮದಲ್ಲಿ ನಡೆದಿದೆ. ಇತ ಬೆಳ್ತಂಗಡಿ ನಿವಾಸಿ ಪ್ರಸಾದ್ ಆಚಾರ್ಯ(೨೮) ಎಂದು ತಿಳಿದು ಬಂದಿದೆ. ಇವರು ಕೇಪು ಕುಕ್ಕೆಬೆಟ್ಟು ಸಂಬಂಧಿಕರ ಮನೆಯಲ್ಲಿ ಚಿನ್ನದ ಕೆಲಸ ನಿರ್ವಹಿಸುತ್ತಿದ್ದ ಪ್ರಸಾದ್ ಆಚಾರ್ಯ ಬುಧವಾರ ತಡರಾತ್ರಿ ಮಹಡಿಯಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದರೆನ್ನಲಾಗಿದೆ. ನಂತರ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಸಿದ್ದು, ವಿಟ್ಲ...
ಹೆಚ್ಚಿನ ಸುದ್ದಿ

ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿವರ ಜನ್ಮದಿನ : ಗೌರವ ಸಲ್ಲಿಸಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಹೈದರಾಬಾದ್ ​: ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರ ವರ 96ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. 'ದೇಶವನ್ನು ಉನ್ನತ ಅಭಿವೃದ್ಧಿಯತ್ತ ಕೊಂಡೊಯ್ದವರು ವಾಜಪೇಯಿಯವರು. ಬಲವಾದ ಮತ್ತು ಸಮೃದ್ಧ ಭಾರತ ನಿರ್ಮಾಣ ಮಾಡುವ ಅವರ ಪ್ರಯತ್ನಗಳನ್ನು ದೇಶ ಸದಾ ನೆನಪಿಟ್ಟುಕೊಳ್ಳುತ್ತದೆ' ಎಂದು ಪ್ರಧಾನಿ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಭಾರತೀಯ ವಿದ್ವಾಂಸ ಪಂಡಿತ್​ ಮದನ್​ ಮೋಹನ ಮಾಳವೀಯ ಅವರ ಜನ್ಮದಿನವೂ ಇಂದೇ ಆಗಿದ್ದು,...
ಹೆಚ್ಚಿನ ಸುದ್ದಿ

2021, ಜನವರಿ 1ರಿಂದಲೇ ಇವುಗಳಲ್ಲಿ ಬದಲಾವಣೆಯಾಗಲಿದೆ – ಕಹಳೆ ನ್ಯೂಸ್

ನವದೆಹಲಿ : ಜನಸಾಮಾನ್ಯರ ಜೀವನದಲ್ಲಿ ಮಹತ್ತರ ಬದಲಾವಣೆ ತರಬಲ್ಲ ಹಲವು ನಿಯಮಗಳು 2021 ರ ಜನವರಿ 1ರಿಂದ ಬದಲಾಗಲಿದೆ. ಚೆಕ್ ಪಾವತಿ, ಎಲ್ ಪಿಜಿ ಸಿಲಿಂಡರ್ ಬೆಲೆ, ಜಿಎಸ್ ಟಿ ಮತ್ತು ಯುಪಿಐ ಟ್ರಾನ್ಸಾಕ್ಷನ್ ಪೇಮೆಂಟ್ ನಿಯಮಗಳು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿವೆ ಯಾದ್ದರಿಂದ, ಈ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. 2021ರ ಜನವರಿ 1ರಿಂದ ಬದಲಾಗಲಿದೆ 10 ನಿಯಮಗಳು :- 1. ಚೆಕ್...
ಹೆಚ್ಚಿನ ಸುದ್ದಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭಕ್ತರ ಸಂಖ್ಯೆ ಹೆಚ್ಚಳ ಆದೇಶ ಪ್ರಶ್ನಿಸಿ , ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ- ಕಹಳೆ ನ್ಯೂಸ್

ನವದೆಹಲಿ:ಕೇರಳ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ, ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೀರ್ಥಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ರವರೆಗೆ ಹೆಚ್ಚಿಸಿ,ಎಂದು ಕೇರಳ ಸರ್ಕಾರ ಸುಪ್ರೀಂ ಮೊರೆ ಹೋಗಿದೆ. ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ ಮಾಡಿರುವುದು, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಆರೋಗ್ಯ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಲಿದೆ ಎಂದು ತಿಳಿಸಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಬರುವ ದೈನಂದಿನ ತೀರ್ಥಯಾತ್ರಿಕರ ಸಂಖ್ಯೆಯನ್ನು ಪ್ರಾರಂಭದ ವಾರದ ದಿನಗಳಲ್ಲಿ 1000 ಮತ್ತು...
ಹೆಚ್ಚಿನ ಸುದ್ದಿ

BREAKING NEWS : ನಟಿ ರಾಗಿಣಿ ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಅವರನ್ನು ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಅವರಿಗೆ ತಡರಾತ್ರಿ ಉಸಿರಾಟ, ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ....
ಹೆಚ್ಚಿನ ಸುದ್ದಿ

ಮೊಬೈಲ್‌ ಆಪ್‌ಗಳ ಮೂಲಕ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೇ RBI ನೀಡಿರುವ ‘ಈ ಎಚ್ಚರಿಕೆ’ಯನ್ನು ತಪ್ಪದೇ ಓದಿ.! – ಕಹಳೆ ನ್ಯೂಸ್

ನವದೆಹಲಿ: ಅನಧಿಕೃತ ಸಾಲ ನೀಡುವ ವೇದಿಕೆಗಳು ಮತ್ತು ಮೊಬೈಲ್ ಆಯಪ್ ಗಳ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಬುಧವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.ತ್ವರಿತ ಮತ್ತು ತೊಂದರೆರಹಿತ ಸಾಲಗಳನ್ನು ಪಡೆಯುವ ವೇಳೆಯಲ್ಲಿ ಜನರು ಡಿಜಿಟಲ್ ಸಾಲ ಹಗರಣಕ್ಕೆ ಬಲಿಯಾಗುತ್ತಿದ್ದಾರೆ ಎಂಬ ವರದಿಗಳು ಬಂದಿವೆ ಎಂದು ಆರ್ ಬಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆರ್‌ಬಿಐ ಹೇಳಿರೋದು ಏನು? : ಸಾಲ ಪಡೆಯುವ ಭರವಸೆಗಳ ಮೇಲೆ ಹೆಚ್ಚುತ್ತಿರುವ ಅನಧಿಕೃತ ಡಿಜಿಟಲ್...
ಹೆಚ್ಚಿನ ಸುದ್ದಿ

ಕರ್ಫ್ಯೂ ವೇಳೆ ಬಾರ್, ಪಬ್ ಮುಚ್ಚದಿದ್ದರೆ ಅಬಕಾರಿ ಪರವಾನಗಿ ರದ್ದು; ಸಚಿವರ ಖಡಕ್​ ಎಚ್ಚರಿಕೆ – ಕಹಳೆ ನ್ಯೂಸ್

ಬೆಂಗಳೂರು : ಕರ್ಫ್ಯೂ ಸಂದರ್ಭದಲ್ಲಿ ಬಾಗಿಲು ಮುಚ್ಚದಿರುವ ಪಬ್ ಹಾಗೂ ಮದ್ಯದಂಗಡಿಗಳ ಪರವಾನಗಿಯನ್ನೇ ಅಮಾನತು ಮಾಡಲಾಗುವುದು ಎಂದು ಅಬಕಾರಿ ಇಲಾಖೆ ಸಚಿವ ಎಚ್. ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲು ಕಮಿಷನರ್‌ಗೆ ಸೂಚಿಸಿದ್ದೇನೆ. ಬ್ರಿಟನ್‌ನಲ್ಲಿ ಕಂಡುಬಂದಿರುವ ರೂಪಾಂತರಿ ಕರೊನಾ ತಡೆಯುವ ಸಲುವಾಗಿ ಸರ್ಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ವಿಧಿಸಿದೆ. ಹಾಗಾಗಿ, ಎಲ್ಲ ಮದ್ಯದಂಗಡಿ ಮಾಲೀಕರು ಕಡ್ಡಾಯವಾಗಿ ರಾತ್ರಿ 10 ಗಂಟೆಯೊಳಗೆ ಪಬ್ ಹಾಗೂ...
1 124 125 126 127 128 174
Page 126 of 174