Saturday, March 14, 2026

ಸುದ್ದಿ

ಜಿಲ್ಲೆಬೆಳಗಾವಿಶುಭಾಶಯಸುದ್ದಿ

ರಾಜ್ಯದ ಯಜಮಾನಿಯರಿಗೆ ಸಿಹಿ ಸುದ್ದಿ : ‘ಗೃಹಲಕ್ಷ್ಮಿ’ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ : ಲಕ್ಷ್ಮಿ ಹೆಬ್ಬಾಳ್ಕರ್ – ಕಹಳೆ ನ್ಯೂಸ್

ಬೆಳಗಾವಿ : ರಾಜ್ಯದ ಯಜಮಾನಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತು ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಇದುವರೆಗೂ ಫಲಾನುಭವಿಗಳಿಗೆ 26 ಕಂಚಿನ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು....
ಸುದ್ದಿ

ಬೆಂಗಳೂರು ಏರ್ ಪೋರ್ಟ್ ನಲ್ಲಿ ಕೋಟ್ಯಂತರ ರೂಪಾಯಿ ಚಿನ್ನ, ವಜ್ರಾಭರಣ ಕಳ್ಳತನ: ಸಿಬ್ಬಂದಿಯಿಂದಲೇ ಕೃತ್ಯ ಶಂಕೆ-ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ವಜ್ರಾಭರಣಗಳು ಕಳ್ಳತನವಾಗಿರುವ ಘಟನೆ ನಡೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ವಜ್ರ ಕಳ್ಳತನವಾಗಿದೆ. ಮಹಿಳೆ ಚೆಕ್ ಇನ್ ನಲ್ಲಿ ಚಿನ್ನ ತೋರಿಸಿ ಬ್ಯಾಗ್ ಗೆ ಟ್ಯಾಗ್ ಮಾಡಿದ್ದರು. ಲಗೇಜ್ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನ ದುಬೈಗೆ ಹೋಗುವಷ್ಟರಲ್ಲಿ ಮಾಯವಾಗಿದೆ. ಏರ್...
ಸುದ್ದಿ

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ 100ಕ್ಕೂ ಹೆಚ್ಚು ಶೆಡ್‌ಗಳಿಗೆ ಬೆಂಕಿ-ಕಹಳೆ ನ್ಯೂಸ್

ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್‌ಗೆ ಬೆಂಕಿ ಬಿದ್ದು 100ಕ್ಕೂ ಅಧಿಕ ಶೆಡ್‌ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ. ಇಂದು ಬೆಳಗ್ಗೆ 5:30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ , ಹುಳಿಮಾವು , ಸರ್ಜಾಪುರ ಹಾಗು ಡೈರಿ ಸರ್ಕಲ್‌ನಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್ ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ....
ಸುದ್ದಿ

WPL 2026 Final : ದಾಖಲೆಯೊಂದಿಗೆ ಇತಿಹಾಸ ಸೃಷ್ಟಿಸಿದ ಸ್ಮೃತಿ-ಕಹಳೆ ನ್ಯೂಸ್

ವಡೋದರಾ: ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕಿ ಸ್ಮೃತಿ ಮಂದಾನ  ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿಯವರೆಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ನಾಯಕಿಯರಿಗೆ ಆರೆಂಜ್‌ ಕ್ಯಾಪ್‌ ಸಿಕ್ಕಿರಲಿಲ್ಲ. ಆದರೆ ಸ್ಮೃತಿ ಮಂದನಾ ಫೈನಲಿನಲ್ಲಿ ಅರ್ಧಶತಕ ಸಿಡಿಸಿ ಒಟ್ಟು 377 ರನ್‌ ಹೊಡೆಯುವ ಮೂಲಕ ಆರೆಂಜ್‌ ಕ್ಯಾಪ್‌ ಪಡೆದರು. ಈ ಪಂದ್ಯಕ್ಕೂ ಮುನ್ನ ಸ್ಮೃತಿ 290 ರನ್‌ ಹೊಡೆದಿದ್ದರೆ ಮುಂಬೈ ಇಂಡಿಯನ್ಸ್‌ (MI) ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 342 ಹೊಡೆಯುವ ಮೂಲಕ ಆರೆಂಜ್‌...
ಸುದ್ದಿ

ಬೆಳಾಲು ಗ್ರಾಮ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ರಜತ ಮಹೋತ್ಸವ ಸಮಿತಿಯ ವತಿಯಿಂದ ಶಾಲೆಗೆ ವಿಶೇಷ ಕೊಡುಗೆಯನ್ನು ನೀಡಿ, ಶಾಲಾಭಿವೃದ್ಧಿಗೆ ಶ್ರಮಿಸಿದ ಶಾಲಾ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೊಡುಗೈ ದಾನಿಗಳಾದ ಶ್ರೀ ಮೋಹನ್ ಕುಮಾರ್ ಮಾಲಕರು ಲಕ್ಷ್ಮಿ ಗ್ರೂಪ್ಸ್ ಉಜಿರೆ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನ-ಕಹಳೆ ನ್ಯೂಸ್

ಬೆಳಾಲು : ಫೆ 05 ಬೆಳಾಲು ಗ್ರಾಮ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ರಜತ ಮಹೋತ್ಸವ ಸಮಿತಿಯ ಪರವಾಗಿ ಶಾಲೆಗೆ ವಿಶೇಷ ಕೊಡುಗೆಯನ್ನು ನೀಡಿ, ಶಾಲಾಭಿವೃದ್ಧಿಗೆ ಶ್ರಮಿಸಿದ ಶಾಲಾ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೊಡುಗೈ ದಾನಿಗಳಾದ ಶ್ರೀ ಮೋಹನ್ ಕುಮಾರ್ ಮಾಲಕರು ಲಕ್ಷ್ಮಿ ಗ್ರೂಪ್ಸ್ ಉಜಿರೆ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಜತಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯಣ್ಣ ಮೀನಂದೇಲು, ಪ್ರಧಾನ ಸಂಚಾಲಕರಾದ ಶ್ರೀಮತಿ ವಿದ್ಯಾ...
ಜಿಲ್ಲೆಬೆಳಗಾವಿಸುದ್ದಿ

ಲೈಟಿಂಗ್ ವೋಲ್ಟರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್‌ : 124 ಜಿಬಿ ಮೆಮೊರಿ ಕಾರ್ಡ್‌, 64 ಜಿಬಿ ಪೆನ್‌ಡ್ರೈವ್‌ ಸೀಜ್‌ – ಕಹಳೆ ನ್ಯೂಸ್

ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ಬೆಡ್‌ ರೂಮ್‌ ಖಾಸಗಿ ಕ್ಷಣಗಳನ್ನ ಸೆರೆ ಹಿಡಿದು 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪತ್ರಕರ್ತರನ್ನ ಬೆಳಗಾವಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.   ಮನೆಗೆ ನುಗ್ಗಿ ಬೆಡ್ ರೂಮ್ ನಲ್ಲಿದ್ದ ಲೈಟಿಂಗ್ ವೋಲ್ಟರ್‌‌ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಕಿರಾತಕರು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು‌ .ಹಣ ಕೊಡದಿದ್ದರೇ ಸೋಷಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ವೈರಲ್ ಮಾಡುವ...
ಬೆಂಗಳೂರುರಾಜ್ಯಸುದ್ದಿ

ನೆಲಮಂಗಲದಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌ : ತಪ್ಪಿದ ಭಾರೀ ಅನಾಹುತ- ಕಹಳೆ ನ್ಯೂಸ್

ನೆಲಮಂಗಲ: ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ (Bus Fire) ಆಹುತಿಯಾಗಿರುವ ಘಟನೆ ನಡೆದಿದೆ. ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ  ಹನುಮಂತಪುರ ಗೇಟ್ ಬಳಿ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ಹೊತ್ತಿ ಉರಿದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ನೆಲಮಂಗಲ ಸಂಚಾರ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು : ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ – ಕಹಳೆ ನ್ಯೂಸ್

ಮಂಗಳೂರು  : ನಗರದ ಪಚ್ಚನಾಡಿ ಪ್ರದೇಶದ ರೈಲ್ವೇ ಹಳಿಯ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತನನ್ನು ಪಚ್ಚನಾಡಿ ಬಂದಲೆ ನಿವಾಸಿ ಬಬಿತ್ ಎಂದು ಗುರುತಿಸಲಾಗಿದೆ. ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣವು ಸಂಶಯಾಸ್ಪದವಾಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಬ್ಯಾಗ್ ಸೇರಿದಂತೆ ಮೃತನಿಗೆ ಸೇರಿದ್ದ ಇತರ ವಸ್ತುಗಳು ಪತ್ತೆಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ...
1 45 46 47 48 49 3,291
Page 47 of 3291