WPL 2026 Final : ದಾಖಲೆಯೊಂದಿಗೆ ಇತಿಹಾಸ ಸೃಷ್ಟಿಸಿದ ಸ್ಮೃತಿ-ಕಹಳೆ ನ್ಯೂಸ್

ವಡೋದರಾ: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿ ಸ್ಮೃತಿ ಮಂದಾನ ಡಬ್ಲ್ಯೂಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಸ್ಮೃತಿ 290 ರನ್ ಹೊಡೆದಿದ್ದರೆ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ 342 ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ರೇಸ್ನಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಸ್ಮೃತಿ 87 ರನ್(41 ಎಸೆತ,12 ಬೌಂಡರಿ, 3 ಸಿಕ್ಸ್) ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.
ತಾನು ಆಡಿದ 9 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ಮೃತಿ ಅವರಿಗೆ ಆರೆಂಜ್ ಕ್ಯಾಪ್ ಧರಿಸುವ ಅವಕಾಶ ಸಿಕ್ಕಿರಲಿಲ್ಲ.ಹೀಗಾಗಿ ಪ್ರಶಸ್ತಿ ಪಡೆಯುವಾಗ ಆರೆಂಜ್ ಕ್ಯಾಪ್ ಧರಿಸಿ ಪ್ರಶಸ್ತಿ ಪಡೆದರು.
2024 ಆರ್ಸಿಬಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಧರಿಸಿದ್ದರು.
WPL 2026 ಸ್ಮೃತಿ ಸಾಧನೆ
– ಆರೆಂಜ್ ಕ್ಯಾಪ್ ವಿನ್ನರ್ – 377 ರನ್
– WPL ವೇಗದ ಅರ್ಧಶತಕ – 23 ಎಸೆತ
– ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಭಾರತೀಯ ಆಟಗಾರ್ತಿ – 377 ರನ್
– WPL ಫೈನಲಿನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ್ತಿ – 87 ರನ್
– 1 ಸಾವಿರ ರನ್ ಹೊಡೆದ ಹೊಡೆದ ಆಟಗಾರ್ತಿಯರ ಕ್ಲಬ್ ಸೇರ್ಪಡೆ – 1023
ಈ ಹಿಂದಿನ ಆರೆಂಜ್ ಕ್ಯಾಪ್ ವಿನ್ನರ್
2023 – ಮೆಗ್ ಲ್ಯಾನಿಂಗ್ – ದೆಹಲಿ ಕ್ಯಾಪಿಟಲ್ಸ್ 345
2024 – ಎಲ್ಲಿಸ್ ಪೆರ್ರಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 347
2025 – ನ್ಯಾಟ್ ಸಿವರ್-ಬ್ರಂಟ್ – ಮುಂಬೈ ಇಂಡಿಯನ್ಸ್ – 523
2026 – ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು – 377











