Saturday, March 14, 2026

ಸುದ್ದಿ

ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ತಾಲೂಕಿನ ಕಣಿಯೂರು ಕಸಬಾ ಹಿರಿಯ ಪ್ರಾಥಮಿಕ ಶಾಲೆಗೆ ಬೋರ್ವೆಲ್ ವ್ಯವಸ್ಥೆ ಮಾಡಿಸಿದ ಶಾಸಕ ಹರೀಶ್ ಪೂಂಜಾ -ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಕಣಿಯೂರು ಕಸಬಾ ಹಿರಿಯ ಪ್ರಾಥಮಿಕ ಶಾಲೆಯ ನೀರಿನ ಸಮಸ್ಯೆಯನ್ನು ಮನಗಂಡು ಶಾಲಾ ಮಕ್ಕಳಿಗೆ ಉಪಯೋಗವಾಗಲು ಬೋರ್ವೆಲ್ ವ್ಯವಸ್ಥೆ ಮಾಡಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರಿಗೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಆ ಭಾಗದ ನಾಗರಿಕರು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು....
ಸುದ್ದಿಹೆಚ್ಚಿನ ಸುದ್ದಿ

ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ -ಕಹಳೆ ನ್ಯೂಸ್

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಹೌದು. ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್‌ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನ 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು....
ಸುದ್ದಿ

ಪಾಕ್‌ನ ದರ್ಗಾದಲ್ಲಿ ಬಾಂಬ್‌ ಸ್ಫೋಟ – 31 ಮಂದಿ ದುರ್ಮರಣ – ಕಹಳೆ ನ್ಯೂಸ್

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ದರ್ಗಾವೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವಿಗೀಡಾಗಿದ್ದಾರೆ. ತರ್ಲೈ ಇಮಾಮ್‌ಬರ್ಗಾದಲ್ಲಿ ಈ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ 31 ಜನ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ ಬಳಿಕ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ . ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪಾಕಿಸ್ತಾನದ...
ಜಿಲ್ಲೆರಾಜ್ಯಸುದ್ದಿ

ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ -ಕಹಳೆ ನ್ಯೂಸ್

ದಾವಣಗೆರೆ: ನಗರದ (Davanagere) ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ...
ಜಿಲ್ಲೆರಾಜ್ಯಸುದ್ದಿ

ಚಿನ್ನ – ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಬರೋಬ್ಬರಿ 25,000 ರೂ ಇಳಿಕೆ- ಕಹಳೆ ನ್ಯೂಸ್

ಚಿನ್ನ ಪ್ರಿಯರಿಗೆ ಶುಭ ಶುಕ್ರವಾರವಾಗಿದೆ. ಕಳೆದ ವಾರದಂತೆಯೇ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಗುರುವಾರವೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಫೆಬ್ರವರಿ 6ರಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 2,070 ರೂಪಾಯಿ ಕಡಿಮೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 25,000 ರೂಪಾಯಿ ಕಡಿಮೆಯಾಗಿದೆ. ಫೆಬ್ರವರಿ 6ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ. ಚಿನ್ನ ಪ್ರಿಯರಿಗೆ...
ದೆಹಲಿರಾಜ್ಯಸುದ್ದಿ

9ನೇ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ಸಂವಾದ – ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ʻಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮ ನಡೆಯುತ್ತಿದೆ. ಇಂದು 9ನೇ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.   ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಡಿ ಸಂವಾದ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷವೂ ದೆಹಲಿಯ ಲೋಕ...
ಬೆಂಗಳೂರುರಾಜ್ಯಸುದ್ದಿ

ಉದ್ಯಮಿ ಅಪಹರಣ ಕೇಸ್‌ ; ಸಿಸಿಬಿಯಿಂದ ರೌಡಿ ಶೀಟರ್‌ ಯಶಸ್ವಿನಿ ಗೌಡ ಅರೆಸ್ಟ್‌ – ಕಹಳೆ ನ್ಯೂಸ್

ಬೆಂಗಳೂರು: ನಿರ್ದೇಶಕ ನಂದಕಿಶೋರ್‌ ಅವರಿಗೆ ಸಾಲ ನೀಡಿದ್ದ ಉದ್ಯಮಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಯಶಸ್ವಿನಿ ಗೌಡಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಸೆ.26ರಂದು ಸಂಜೆ 6: 30ರ ಸುಮಾರಿಗೆ ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮನೋಜ್ ಅವರನ್ನು ರೌಡಿಗಳ ಗುಂಪು ಅಪಹರಿಸಿತ್ತು. ಈ ಪ್ರಕರಣದಲ್ಲಿ ಬೇಕರಿ ರಘು, ರಾಜೇಶ್, ವೆಂಕಟೇಶ್ ಸೇರಿದಂತೆ ಹಲವರನ್ನು ಬಂಧನ ಮಾಡಲಾಗಿತ್ತು. ಮಂಡ್ಯದಲ್ಲಿ ಬೇಕರಿ ರಘು...
ಜಿಲ್ಲೆಬೆಳಗಾವಿಶುಭಾಶಯಸುದ್ದಿ

ರಾಜ್ಯದ ಯಜಮಾನಿಯರಿಗೆ ಸಿಹಿ ಸುದ್ದಿ : ‘ಗೃಹಲಕ್ಷ್ಮಿ’ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ : ಲಕ್ಷ್ಮಿ ಹೆಬ್ಬಾಳ್ಕರ್ – ಕಹಳೆ ನ್ಯೂಸ್

ಬೆಳಗಾವಿ : ರಾಜ್ಯದ ಯಜಮಾನಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತು ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಇದುವರೆಗೂ ಫಲಾನುಭವಿಗಳಿಗೆ 26 ಕಂಚಿನ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು....
1 43 44 45 46 47 3,290
Page 45 of 3290