Friday, March 13, 2026

ಸುದ್ದಿ

ಸುದ್ದಿ

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬೇಡಿ | ಜಾಗರಣಾ ವೇದಿಕೆ ಪುತ್ತೂರಿನಲ್ಲಿ ಮನವಿ.

ಪುತ್ತೂರು : ಹಿಂದೂ ವಿರೋಧಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಇದರ ನೇತ್ರತ್ವದಲ್ಲಿ ರಾಜ್ಯಪಾಲರಿಗೆ ಮನವಿ ಮಾಡಲಾಯಿತು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ. ತಾಲೂಕು ಪಂಚಾಯತ್ ಸದಸ್ಯ ರಾಧಕ್ರಷ್ಣ ಭೋರ್ಕರ್,ಹೀರೆಭಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ನ್ಯಾಯವಾದಿ ರಾಘವೇಂದ್ರ ನಟ್ಟಿಬೈಲು,ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಹೋಸಮನೆ, ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲ್, ಸಂಚಾಲಕರಾದ ಚಿನ್ಮಯ್...
ಸುದ್ದಿ

ಚಿಕ್ಕಮುಡ್ನೂರಿನಲ್ಲಿ ಮೂಲಭೂತ ಸೌಕರ್ಯದ ಕೊರತೆ | ಅಶೋಕ್ ರೈವರಿಂದ ಸ್ಥಳಕ್ಕೆ ಭೇಟಿ ಮತ್ತು ಸಹಾಯ ಹಸ್ತ.

ಪುತ್ತೂರು : ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಗಡಿಕಲ್ಲು ನಿವಾಸಿ ಬೊಮ್ಮಿ ಎಂಬವರ ಮನೆಯು ಕುಸಿಯುವ ಹಂತದಲ್ಲಿದ್ದು ಮತ್ತು ಸಮರ್ಪಕ ಶೌಚಾಲಯದ ಕೊರತೆಯಿದ್ದು,ಅಂತೆಯೇ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ನಿವಾಸಿ ಶಶಿರೇಖಾ ಎಂಬವರ ಮನೆಗೆ ಆರ್ಥಿಕ ಸಮಸ್ಯೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತವಾಗಿರುವುದನ್ನು ಮನಗಂಡ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೊಮ್ಮಿ ಎಂಬವರ ಮನೆ ದುರಸ್ತಿ ಮತ್ತು ಶೌಚಾಲಯದ ದುರಸ್ತಿ...
ಸುದ್ದಿ

ವಿಶ್ವ ಹಿಂದು ಪರಿಷದ್ ನ ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ನ ಪುತ್ತೂರು ಜಿಲ್ಲಾ ಕಾರ್ಯಲಯ ಉದ್ಘಾಟನೆ.

ಪುತ್ತೂರು : ವಿಶ್ವ ಹಿಂದು ಪರಿಷದ್ ವತಿಯಿಂದ ನವೆಂಬರ್ 24,25,26 ರಂದು ದೇಶದ 2000 ಸಂತರ ನೇತ್ರತ್ವದಲ್ಲಿ ಉಡುಪಿಯಲ್ಲಿ ನಡೆಯುವ ಹಿಂದು ಸಮಾಜದ ಧರ್ಮಚಾರ್ಯರ ಮತ್ತು ಪೀಠಾಧಿಪತಿಗಳ ಮಹಾ ಸಭೆ "ಧರ್ಮ ಸಂಸದ್" ಕಾರ್ಯಕ್ರಮ ದ ಪೂರ್ವಭಾವಿಯಾಗಿ ಪುತ್ತೂರು ಜಿಲ್ಲಾ ಕಾರ್ಯಾಲಯವು ಪುತ್ತೂರಿನ ವಿಶ್ವ ಹಿಂದು ಪರಿಷದ್ ಬಜರಂಗದಳ ಕಾರ್ಯಲಯ ದಲ್ಲಿ ಉದ್ಘಾಟನೆ ಗೂಂಡಿತು. ಪುತ್ತೂರಿನ ಖ್ಯಾತ ಉದ್ಯಮಿ ಧರ್ಮ ಸಂಸದ್ ನ ಸ್ವಾಗತ ಸಮಿತಿ ಸದಸ್ಯರಾದ ಬಲರಾಮ ಅಚಾರ್ಯ...
ಸುದ್ದಿ

ಮಂಗಳೂರು ಕಾಂಗ್ರೆಸ್ ಒಡೆದ ಮನೆ, ಸಿ.ಎಂ. ಮುಂದೆಯೇ ಸಾಭೀತು| ಐವಾನ್ ಡಿಸೋಜಾರನ್ನು ತಳ್ಳಿದ ಮಿಥುನ್ ರೈ.

ಮಂಗಳೂರು : ಬಂಟ್ವಾಳ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮಂಗಳೂರಿಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಅವರ ಮುಂದೆಯೇ ಮಂಗಳೂರು ಕಾಂಗ್ರೆಸ್ ನಲ್ಲಿರುವ ಬಿರುಕು ಬಹಿರಂಗಗೊಂಡಿದೆ. ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಎಂಎಲ್ಎ ಅಭಯಚಂದ್ರ ಜೈನ್ ಮತ್ತು ಎಂಎಲ್ಸಿ ಐವನ್ ಡಿಸೋಜಾ ಅವರು ತಮ್ಮ ಬೆಂಬಲಿಗರ ಜೊತೆ ಬೇರೆ ಬೇರೆ ಪ್ಲೆಕಾರ್ಡ್ಸ್ ಗಳನ್ನು ಹಿಡಿದುಕೊಂಡು ನಿಂತಿದ್ದರು. ಸ್ವಲ್ಪ ತಡವಾಗಿ ಬಂದ ಸಿಎಂ ಅವರನ್ನು ಮಾತನಾಡಿಸಲು...
ಸುದ್ದಿ

ಯಾರೇ ವಿರೋಧಿಸಿದರೂ ಟಿಪ್ಪು ಜಯಂತಿ ಆಚರಿಸುತ್ತೇವೆ | ಸಿ.ಎಂ. ಮಂಗಳೂರಿನಲ್ಲಿ ಹೇಳಿಕೆ.

ಮಂಗಳೂರು : 'ಯಾರೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿಕೆ ನೀಡಿದ್ದಾರೆ.  ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ  ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ. 'ಟಿಪ್ಪು ಜಯಂತಿಯನ್ನು  ವಿರೋಧಿಸುವವರು ಮೊದಲು ಇತಿಹಾಸ ತಿಳಿದುಕೊಳ್ಳಲಿ. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ  ಹೆಸರು ಹಾಕಿದ್ದೇವೆ. ಯಾರೇ ಬರಲಿ ಬಿಡಲಿ ನಾವು ಟಿಪ್ಪು...
ಸುದ್ದಿ

ಟಿಪ್ಪು ಇಪ್ಪತ್ತನೇ ಶತಮಾನದ ಹಿಟ್ಲರ್ | ಡಾ ಚಿದಾನಂದಮೂರ್ತಿ.

ಬೆಂಗಳೂರು : ಟಿಪ್ಪು ಜಯಂತಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಸಂಶೋಧಕ ಡಾ. ಚಿದಾನಂದಮೂರ್ತಿ ಟಿಪ್ಪು ಸುಲ್ತಾನ್ ಇಪ್ಪತ್ತನೇ ಶತಮಾನದ ಹಿಟ್ಲರ್ ಎಂದು ಹೇಳಿದ್ದಾರೆ. ಟಿಪ್ಪುವನ್ನು ಹಿಟ್ಲರ್ ಎನ್ನಲು ನನಗೆ ಭಯವಿಲ್ಲ, ನಾನು ಕೋಮುವಾದಿಯೂ ಅಲ್ಲ, ನಾನು ಧೈರ್ಯದಿಂದ ಈ ಹೇಳಿಕೆಯನ್ನು ನೋಡುತ್ತಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ....
ಸುದ್ದಿ

ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸುತ್ತಿದೆ ಜೈ ಗೋಮಾತ | ಶಾಂತ ಕುಂಟಿನಿ ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ.

ಪುತ್ತೂರು : ಪ್ರತಿಷ್ಠಿತ ಸತ್ಯ ಶಾಂತ ಪ್ರೋಡಕ್ಷನ್ಸ್ ನವರು ದೀಪಾವಳಿಗೆ ಉಡುಗೊರೆಯಾಗಿ ಗೋವಿನ ಮಹತ್ವವನ್ನು ಸಾರುವ ಜೈ ಗೋಮಾತ ಶೀರ್ಶಿಕೆಯ ಗೋವಿನ ಹಾಡನ್ನು ಯುಟ್ಯೂಬ್ ಮೂಲಕ ರಿಲೀಸ್ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಖ್ಯಾತ ಸಾಹಿತಿ ಶಾಂತ ಕುಂಟಿನಿಯವರು ರಚಿಸಿರುವ ಅರ್ಥಪೂರ್ಣ ಸಾಹಿತ್ಯಕ್ಕೆ ಜಗದೀಶ್ ಪುತ್ತೂರು ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಶ್ಯಾಮ ಸುದರ್ಶನ ಹೊಸಮೂಲೆ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಗೆ ನಟೇಶ್ ಭಟ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಚಿಕ್ಕಮಂಗಳೂರು, ಧರ್ಮಸ್ಥಳ,...
ಸುದ್ದಿ

ಇಂದು ಕಜೆ ಈಶ್ವರ ಭಟ್ ಗೆ ಶ್ರೇಣಿ ಶತಮಾನೋತ್ಸವ ಪ್ರಶಸ್ತಿ | ಶ್ರೇಣಿ ಸಂಸ್ಕರಣೆ, ತಾಳಮದ್ದಳೆ.

ಉಪ್ಪಿನಂಗಡಿ : ಶ್ರೇಣಿ ಗೋಪಾಲಕೃಷ್ಣ ಭಟ್ ಚ್ಯಾರಿಟೇಬಲ್ ಟ್ರಸ್ಟ್ ರಿ. ಸುರತ್ಕಲ್ ಇವರ ಆಶ್ರಯದಲ್ಲಿ ಶ್ರೇಣಿ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಉಪ್ಪಿನಂಗಡಿಯ ಕಾಳಿಕಾಂಬಾ ಕಲಾಸೇವಾ ಸಂಘ ಮತ್ತು ಯಕ್ಚಸಂಗಮ ಉಪ್ಪಿನಂಗಡಿ ಇವುಗಳ ಜಂಟಿ ಸಹಯೋಗದೊಂದಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಶನಿವಾರ ಸಂಜೆ ಗಂಟೆ ೪.೦೦ ರಿಂದ ಶ್ರೇಣಿ ಸಂಸ್ಕರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು, ಅಪ್ರತಿಮ ಯಕ್ಷಗಾನ ಸಂಘಟಕರಾದ ಕಜೆ ಈಶ್ವರ ಭಟ್...
1 3,267 3,268 3,269 3,270 3,271 3,289
Page 3269 of 3289