Friday, March 13, 2026

ಸುದ್ದಿ

ಸುದ್ದಿ

ರಾಜ್ಯಾದ್ಯಂತ ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ : ಹೆಚ್ಚಿದ ಆತಂಕ, ಪೊಲೀಸರಿಂದ ತೀವ್ರ ಶೋಧ- ಕಹಳೆ ನ್ಯೂಸ್

ಮಡಿಕೇರಿ/ಹಾಸನ/ಧಾರವಾಡ: ಕೊಡಗು, ಧಾರವಾಡ, ದಾವಣಗೆರೆ, ಹಾಸನ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಏಕಕಾಲಕ್ಕೆ ಬಾಂಬ್‌ ಬೆದರಿಕೆ  ಬಂದಿದೆ. ಇದರಿಂದ ಸಾರ್ವಜನಿಕರು, ವಕೀಲರು ಹಾಗೂ ಕೋರ್ಟ್‌ ಸಿಬ್ಬಂದಿ ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು , ಬಾಂಬ್‌ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ದೌಡಾಯಿಸಿದ್ದು, ತಪಾಸಣೆ ಕೈಗೊಂಡಿದ್ದಾರೆ. ಮಡಿಕೇರಿ ನ್ಯಾಯಾಲಯ ಸಂಕೀರ್ಣಕ್ಕೆ ಬೆದರಿಕೆ ಮಡಿಕೇರಿಯಲ್ಲಿ  ಇರುವ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆಯಾಗಿ...
ಸುದ್ದಿ

ವಸತಿ ಶಾಲೆಯ 3ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ- ಕಹಳೆ ನ್ಯೂಸ್

ಚಿತ್ರದುರ್ಗ: ಮೂರನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಚಿತ್ರದುರ್ಗ  ಜಿಲ್ಲೆ ಭರಮಸಾಗರದ  ಖಾಸಗಿ ಶಾಲೆಯಲ್ಲಿ ನಡೆದಿದೆ. ಇಲ್ಲಿನ ವಸತಿ ಶಾಲೆಯ ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿ 16 ವರ್ಷದ ಕೊಟ್ರೇಶ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕೊಟ್ರೇಶ್ ಚಿತ್ರದುರ್ಗದ ಕರಿಯಣ್ಣನಹಳ್ಳಿ ಮೂಲದವನಾಗಿದ್ದು, ಈವರೆಗೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಟ್ರೇಶ್ 3ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ....
ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ – ಏ.7 ರಿಂದ 9 ನ್ಯಾಯಾಧೀಶರ ಪೀಠದಲ್ಲಿ ಮರುಪರಿಶೀಲನಾ ಅರ್ಜಿ ವಿಚಾರಣೆ- ಕಹಳೆ ನ್ಯೂಸ್

ನವದೆಹಲಿ/ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ದೀರ್ಘ ಸಮಯದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಕೇರಳದಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಶಬರಿಮಲೆ ದೇಗುಲಕ್ಕೆ  ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸೆಪ್ಟೆಂಬರ್ 2018 ರ ತೀರ್ಪು ಮರುಪರಿಶೀಲನಾ ಅರ್ಜಿಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. 9 ನ್ಯಾಯಮೂರ್ತಿಗಳ ಪ್ರತ್ಯೇಕ ಪೀಠವು ಏಪ್ರಿಲ್‌ 7 ರಿಂದ ಅರ್ಜಿ ವಿಚಾರಣೆ ನಡೆಸಲಿದ್ದು, ಏಪ್ರಿಲ್‌ 22 ರಂದು ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ಸುಪ್ರೀಂ...
ಬೆಂಗಳೂರುರಾಜ್ಯಸುದ್ದಿ

ಕೆನಡಾದಲ್ಲಿ ಕನ್ನಡಿಗನಿಗೆ ಗುಂಡಿಟ್ಟು ಹತ್ಯೆ : ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ – ಕಹಳೆ ನ್ಯೂಸ್

ಬೆಂಗಳೂರು: ಕೆನಡಾದಲ್ಲಿ ಕನ್ನಡಿಗನಿಗೆ ಗುಂಡಿಟ್ಟು ಹತ್ಯೆ ಪ್ರಕರಣ ಸಂಬಂಧ ಕನ್ನಡಿಗ ಚಂದನ್ ಮೃತದೇಹ ಸ್ವಗ್ರಾಮ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುಗೆ ಆಗಮಿಸಿದ್ದು, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಕೊಲೆಯಾಗಿ ಒಂದು ವಾರದ ಬಳಿಕ ಸ್ವಗ್ರಾಮಕ್ಕೆ ಚಂದನ್ ಮೃತದೇಹ ಆಗಮಿಸಿದೆ. ಭಾನುವಾರ ರಾತ್ರಿ 11:49ರ ಸುಮಾರಿಗೆ ಚಂದನ್ ಮೃತದೇಹವನ್ನು ತ್ಯಾಮಗೊಂಡ್ಲುಗೆ ತರಲಾಗಿದ್ದು, ಮನೆ ಮುಂದೆ ಅಂತಿಮ ವಿಧಿವಿಧಾನದ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ತ್ಯಾಮಗೊಂಡ್ಲುವಿನ ಗ್ರಾಮೀಣ ಬ್ಯಾಂಕ್ ಹತ್ತಿರ ಅಂತಿಮ ದರ್ಶನಕ್ಕೆ ಸಿದ್ಧತೆ...
ದೆಹಲಿರಾಜ್ಯಸುದ್ದಿ

ಇಂದಿನಿಂದ AI ಇಂಪ್ಯಾಕ್ಟ್ ಶೃಂಗಸಭೆ : ಭಾರತದಲ್ಲಿ ರಸ್ತೆ ಸುರಕ್ಷತೆಗೆ ಎಐ ಬಳಕೆ ಕುರಿತು ಚರ್ಚೆ-ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ (ಫೆ.16) 5 ದಿನಗಳ ಕಾಲ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿದೆ. ವಿಶ್ವದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಯುಗದಲ್ಲಿ ಐಐ ಕುರಿತ ಮೊದಲ ಶೃಂಗ ಸಮ್ಮೇಳನ ಇದಾಗಿದೆ. ಎಐ ಕುರಿತು ಅರಿವು ಮೂಡಿಸುವ ಜೊತೆಗೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನ ಪ್ರಚುರಪಡಿಸುವ ಕಾರ್ಯ ಈ ಸಮ್ಮೇಳನದಲ್ಲಿ ಆಗಲಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ....
ಸುದ್ದಿ

ಮಂಗಳವಾರ ವರ್ಷದ ಮೊದಲ ʻಕಂಕಣ ಸೂರ್ಯಗ್ರಹಣ- ಕಹಳೆ ನ್ಯೂಸ್

ನವದೆಹಲಿ: 2026 ರ ವರ್ಷದ ಮೊದಲ ಸೂರ್ಯಗ್ರಹಣ  ಮಂಗಳವಾರ (ಫೆ.17) ಗೋಚರವಾಗಲಿದೆ. ಇದನ್ನ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಮಂಗಳವಾರ ಮಧ್ಯಾಹ್ನ 3:26 ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7:57 ಕ್ಕೆ ಕೊನೆಗೊಳ್ಳಲಿದೆ. ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, 2 ನಿಮಿಷ 20 ಸೆಕೆಂಡುಗಳ ವರೆಗೆ ಇರಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96% ರಷ್ಟನ್ನು ಚಂದ್ರ ಆವರಿಸಲಿದೆ....
ಸುದ್ದಿ

ಹಿಂದೂ ರಾಷ್ಟ್ರ ಜಾಗೃತಿ ಸಭೆ’ಗೆ ಎಸ್‌ಡಿಪಿಐ ಆಕ್ಷೇಪ; ಪ್ರತಿರೋಧದ ನಡುವೆಯೂ ಯಶಸ್ವಿಯಾಗಿ ಜರುಗಿದ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರಿನ ಕುಂಬ್ರ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಕಾರ್ಯಕ್ರಮವು ತೀವ್ರ ವಿರೋಧ ಮತ್ತು ಸವಾಲುಗಳ ನಡುವೆಯೂ ಯಶಸ್ವಿಯಾಗಿ ನೆರವೇರಿತು. ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯಕುಮಾರ್ ಮಾತನಾಡಿ ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಜನರು ಇರುವಂತಹ ರಾಷ್ಟ್ರವಾಗಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿ ಇಂತಹ ಧರ್ಮಜಾಗೃತಿ ಸಭೆಗಳಿಗೆ ವಿರೋಧ ಮಾಡುವುದು ಮತ್ತು ಅಡ್ಡಿಪಡಿಸುವುದು ಮತಾಂಧರ ನಿತ್ಯದ ಸಂಸ್ಕಾರವಾಗಿದೆ. ನಾವು ಮಾಡುತ್ತಿರುವುದು ಭಗವಾನ್ ಶ್ರೀ...
ಸುದ್ದಿ

ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ಕನ್ನ –154 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ ಕಳ್ಳತನ -ಕಹಳೆ ನ್ಯೂಸ್

ವಿಜಯಪುರ: ಮಹಾಶಿವರಾತ್ರಿ ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆ ಕಳ್ಳತನ ಮಾಡಿರುವ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ. ಸೋಮಶೇಖರ ಗಣಿ ಎಂಬವರ ಮನೆ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಶಿವಗಿರಿಗೆ ಕುಟುಂಬಸ್ಥರು ತೆರಳಿದ್ದರು. ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಮ್ಯಾಚ್...
1 29 30 31 32 33 3,289
Page 31 of 3289