ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ- ಭುವನ್ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್ ನೀಡಿದ್ದಾರೆ. ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ...






