“ಹವ್ಯಕ ಸಾಧಕ ರತ್ನ ಪ್ರಶಸ್ತಿ”ಗೆ ಆಯ್ಕೆಯಾದ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್- ಕಹಳೆ ನ್ಯೂಸ್
ಪುತ್ತೂರು: ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಗೋಪಾಲಕೃಷ್ಣ ಭಟ್ ರವರು ಅಖಿಲ ಹವ್ಯಕ ಮಹಾಸಭಾ(ರಿ.) ಬೆಂಗಳೂರು ಇವರು ಕೊಡಮಾಡುವ ‘ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಡಿ.27 ರಂದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಗೋಪಾಲಕೃಷ್ಣ ಭಟ್ ರವರ ಪರಿಚಯ..!!! 1983ನೇ ಇಸವಿ ಫೆಬ್ರವರಿ 21 ರಂದು ಪ್ರಸಿದ್ಧ ಕಿಜಕ್ಕಾರು ಮನೆತನದಲ್ಲಿ ಶ್ರೀಯುತ ಹರಿಕೃಷ್ಣ ಭಟ್ ಮತ್ತು ಶ್ರೀಮತಿ...







